ಹುಬ್ಬಳ್ಳಿ: ವ್ಯಕ್ತಿಯೊಬ್ಬ ಕುತ್ತಿಗೆಗೆ ಬೆಡ್ಶೀಟ್ ಕಟ್ಟಿಕೊಂಡು ನೇಣಿಗೆ ಶರಣಾದ ಘಟನೆ ಚನ್ನಮ್ಮ ವೃತ್ತದ ಹತ್ತಿರ ಇರುವ ಲಾಡ್ಜ್ವೊಂದರಲ್ಲಿ ನಡೆದಿದೆ. ಮೃತ ಯುವಕನನ್ನು ಕಲಘಟಗಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದ ನಿವಾಸಿ ಸಂತೋಷ ಯಲ್ಲಪ್ಪ ಹರಿಜನ ಎಂದು ಗುರುತಿಸಲಾಗಿದೆ. ಸಂತೋಷ ವೃತ್ತಿಯಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಡಿಸೆಂಬರ್ 19 ರಂದು ಲಾಡ್ಜ್ನ ಕೊಠಡಿಯೊಂದನ್ನು ಬುಕ್ ಮಾಡಿದ್ದ ಸಂತೋಷ, ತನ್ನ ವೈಯಕ್ತಿಕ ಕಾರಣಗಳಿಂದ ಬೇಸತ್ತು ನೇಣಿಗೆ ಶರಣಾಗಿರಬಹುದು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ನಾಲ್ಕು ದಿನಗಳಿಂದ ಈತ ಕೊಠಡಿಯಿಂದ ಹೊರ ಬಂದಿರಲಿಲ್ಲ. ಅಲ್ಲದೇ ಈತ ವಾಸವಿದ್ದ ಕೊಠಡಿಯಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ್ದ ಲಾಡ್ಜ್ ಸಿಬ್ಬಂದಿ, ಅನುಮಾನದ ಮೇಲೆ ಹುಬ್ಬಳ್ಳಿ ಉಪನಗರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಸಂತೋಷ ನೇಣಿಗೆ ಶರಣಾಗಿದ್ದು ಗೊತ್ತಾಗಿದೆ. ನಾಲ್ಕು ದಿನಗಳ ಹಿಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಆರೇ ಗಂಟೆಯಲ್ಲಿ 18 ಲಕ್ಷ ಕಳೆದುಕೊಂಡ ಸಾಫ್ಟ್ವೇರ್ ಇಂಜಿನಿಯರ್..ಯುವತಿಗೆ ವಂಚನೆ ಮಾಡಿದ ಸೈಬರ್ ಅಪರಾಧಿಗಳು!