ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಚುರುಕುಗೊಂಡಿದೆ. ವಿನಯ್ ಕುಲಕರ್ಣಿ ಆಪ್ತ ಹಾಗೂ ಸಹೋದರನ ವಿಚಾರಣೆ ನಡೆಯುತ್ತಿದೆ.
ಡೈರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಟರಾಜ, ಕೊಲೆ ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಮತ್ತು ವಿನಯ್ ಸಹೋದರ ವಿಜಯ್ ಕುಲಕರ್ಣಿ ಅವರಿಗೆ ಸಿಬಿಐ ಬುಲಾವ್ ನೀಡಿ, ವಿಚಾರಣೆಗಾಗಿ ಉಪನಗರ ಪೊಲೀಸ್ ಠಾಣೆಗೆ ಕರೆಸಿಕೊಂಡಿದೆ.
ಓದಿ:ಮಹಾಭಾರತದ ಶಕುನಿಯಂತೆ ‘ಚಂದು ಮಾಮಾ’ ಪಾತ್ರ: ಬಸವರಾಜ ಮುತ್ತಗಿ
ಮಾಜಿ ಸಚಿವ ವಿನಯ್ ಸೋದರ ಮಾವನನ್ನು ಈಗಾಗಲೇ ಸಿಬಿಐ ತನ್ನ ವಶಕ್ಕೆ ಪಡೆದುಕೊಂಡಿದೆ. ನಟರಾಜ, ವಿಜಯ್ ಹಾಗೂ ಮುತ್ತಗಿ ವಿಚಾರಣೆ ಮತ್ತಷ್ಟು ಕುತೂಹಲ ಕೆರಳಿಸಿದೆ.