ಧಾರವಾಡ: ಬಿಜೆಪಿ ನಾಯಕ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಿಬಿಐ ತನಿಖೆ ಮುಂದುವರೆದಿದ್ದು, ಇಂದು ಕೂಡ ಕೆಲವರನ್ನು ಕರೆಸಿ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಇಬ್ಬರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಬಿಐ ತಂಡ ಧಾರವಾಡಕ್ಕೆ ಆಗಮಿಸಿದ್ದು, ನಿನ್ನೆ ರಾತ್ರಿ ಕೆಲವರ ವಿಚಾರಣೆ ನಡೆಸಲಾಗಿದೆ. ಉಪನಗರ ಠಾಣೆಗೆ ಕೆಲವರನ್ನು ಸಿಬಿಐ ಅಧಿಕಾರಿಗಳು ಕರೆಸಿಕೊಂಡಿದ್ದಾರೆ.
ಇಂದು ಕೆಲವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆ ವಿಚಾರಣೆಗೆ ಬಂದಿದ್ದ ಕೆಲವರಿಗೆ ಇಂದು ಕೂಡ ಆಗಮಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.