ETV Bharat / state

ಯೋಗೀಶ್​ಗೌಡ ಕೊಲೆ ಕೇಸ್‌... ಸಿಬಿಐನಿಂದ ಮುಂದುವರಿದ ವಿಚಾರಣೆ - ಯೋಗೀಶ್​ ಗೌಡ ಪತ್ನಿ ಮಲ್ಲಮ್ಮ

ವಿಚಾರಣೆ ಮುಗಿಸಿ ಕಚೇರಿಯಿಂದ ಹೊರಬಂದ ಬಳಿಕ‍ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಮ್ಮ, ವಿಚಾರಣೆ ಕುರಿತಾಗಿ ವದಂತಿಗಳು ಬೇಡ ಎಂದರು..

Yogesh Gowda
ಯೋಗೀಶ್​ ಗೌಡ
author img

By

Published : Sep 18, 2020, 3:23 PM IST

Updated : Sep 18, 2020, 3:30 PM IST

ಧಾರವಾಡ : ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಇಂದು ಕೂಡ ಮುಂದುವರೆದಿದೆ. ಯೋಗೀಶ್​ಗೌಡ ಪತ್ನಿ ಮಲ್ಲಮ್ಮ ಹಾಗೂ ಜಿಪಂ ಉಪಾಧ್ಯಕ್ಷರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ವಿಚಾರಣೆಗೆ ಹಾಜರಾದ ಮಲ್ಲಮ್ಮ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಗುರುನಾಥ ಗೌಡ

ನಿನ್ನೆ ಇಡೀ ದಿನ ನಡೆದಿದ್ದ ವಿಚಾರಣೆ ಇಂದು ಅಧಿಕಾರಿಗಳಿಂದ ಅರ್ಧ ದಿನ ಮಾತ್ರ ನಡೀತು. ಮೃತ ಯೋಗೀಶ್​ಗೌಡನ ಸಹೋದರ ಗುರುನಾಥ ಗೌಡ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಸಿಕೊಂಡಿದ್ದು, ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ವಿಚಾರಣೆ ಮುಗಿಸಿ ಕಚೇರಿಯಿಂದ ಹೊರಬಂದ ಬಳಿಕ‍ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಮ್ಮ, ವಿಚಾರಣೆ ಕುರಿತಾಗಿ ವದಂತಿಗಳು ಬೇಡ ಎಂದರು.

ಅವರ ಬಳಿಕ ಹೊರಬಂದ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಲ್ಲಮ್ಮ ಅವರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸಲು ಮಾತ್ರ ಭೇಟಿ ಮಾಡಿಸಿದ್ದೆ. ನಿನ್ನೆ ಸಮಯ ಇರದ ಕಾರಣ ಇವತ್ತು ಮತ್ತೆ ಅಧಿಕಾರಿಗಳು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.

Last Updated : Sep 18, 2020, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.