ಧಾರವಾಡ : ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ತಂಡ ಕಾಂಗ್ರೆಸ್ ಮುಖಂಡನನ್ನು ವಿಚಾರಣೆಗಾಗಿ ಕರೆಸಿಕೊಂಡಿದೆ.
ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿಯನ್ನು ಸಿಬಿಐ ಅಧಿಕಾರಿಗಳು ಕರೆಸಿಕೊಂಡಿದ್ದಾರೆ. ರಾತ್ರಿ ವೇಳೆ ದಿಢೀರನೇ ಮತ್ತೆ ಸಿಬಿಐ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
ನಾಗರಾಜ ಗೌರಿಯನ್ನು ಕರೆಯಿಸಿ ವಿಚಾರಣೆ ಮಾಡಲಾಗುತ್ತಿದ್ದು, ಮೃತ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರಲು ನಾಗರಾಜ ಗೌರಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪವಿದೆ. ಇಂದು ಬೆಳಗ್ಗೆಯಿಂದ ಸಿಬಿಐ ಅಧಿಕಾರಿಗಳು ಬಸವರಾಜ ಮುತ್ತಗಿ, ವಿನಯ್ ಕುಲಕರ್ಣಿ ಆಪ್ತ ಶ್ರೀಶಾ ಪಾಟೀಲ್ ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ.