ಹುಬ್ಬಳ್ಳಿ: ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯಿಂದ ಪೀಡಿತವಾಗುತ್ತಿದ್ದು, ಈ ವೇಳೆಯಲ್ಲಿ ಹಗಲಿರುಳು ಕೊರೊನಾ ತಡೆಗೆ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಸಾಹಿತಿಗಳೆಲ್ಲ ಸೇರಿಕೊಂಡು ಹಾಡಿನ ಮೂಲಕ ಗೌರವ ಸಲ್ಲಿಸಿದ್ದಾರೆ.
ಕೊರೊನಾ ವಿರುದ್ಧ ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಹುಬ್ಬಳ್ಳಿಯ ಸಾಹಿತಿ ಸುಭಾಷ್ ನರೇಂದ್ರ, ನಿರ್ದೇಶಕ ಯಶವಂತ್ ಸರದೇಶಪಾಂಡೆ , ಗಾಯಕ ಶ್ರೀನಿವಾಸಜೋಶಿ, ಜಯತೀರ್ಥ,ಲಿಂಗರಾಜ ಅಂಗಡಿ ಸಾಹಿತಿಗಳು ಎಲ್ಲರೂ ಅಭಿನಂದನೆ ಜೊತೆಗೆ ಗೌರವ ಸಲ್ಲಿಸಿದ್ದಾರೆ.
ವೈದ್ಯರು, ಪೊಲೀಸ್, ಪೌರ ಕಾರ್ಮಿಕರಿಗೆ ವಂದನೆ ಅಭಿನಂದನೆ ಹಗಲಿರುಳು ಎನ್ನದೇ ಶ್ರಮವಹಿಸಿ ದನಿವನ್ನು ಅರಿಯದ ದೇವರುಗಳಿಗೆ ವಂದನೆ ಅಭಿನಂದನೆ .. ಸ್ವಾರ್ಥ ತ್ಯಜಿಸಿ ನಿಸ್ವಾರ್ಥ ಬಾವದಿ ನಮ್ಮನ್ನು ರಕ್ಷಿಸಿಸುವ ನಿಮಗೆ ವಂದನೆ ಅಭಿನಂದನೆ. ನಿಮ್ಮ ಸೇವೆಗೆ ಚಿರರುಣಿ ನಾವು ಸದಾ ಸ್ಮರಿಸುವುದು ದೇಶ ನಿಮ್ಮನ್ನು ಆಪ್ತ ಬಾಂಧವರೆ ನಿಮ್ಮ ಸೇವೆ ಶ್ರೇಷ್ಠ ಸೇವೆಯು ನಿಮಗಿದು ನಮ್ಮ ವಂದನೆ ಅಭಿನಂದನೆ ಹೃದಯ ತುಂಬಿದ ಅಭಿನಂದನೆ' ಎಂಬ ಗೀತೆ ರಚನೆ ಮಾಡಿ ತಮ್ಮದೇ ಆದ ರೀತಿಯಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸ್ ಸಿಬ್ಬಂದಿ,ಪೌರ ಕಾರ್ಮಿಕರಿಗೆ ಅಭಿನಂದನೆ ಕೋರಿದ್ದಾರೆ.!