ಹುಬ್ಬಳ್ಳಿ: ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವ್ಯಾಪ್ತಿಯ ಒಟ್ಟು 71 ಗ್ರಾಮ ಪಂಚಾಯತ್ಗಳ 385 ಮತಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
1,65,319 ಪುರುಷ, 1,57,723 ಮಹಿಳೆ ಹಾಗೂ 5 ಇತರೆ ಮತದಾರರು ಇಂದು ಮತ ಚಲಾಯಿಸಲಿದ್ದಾರೆ. 1,032 ಗ್ರಾಪಂ ಸದಸ್ಯ ಸ್ಥಾನಗಳಿಗೆ 2,974 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 62 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. 469 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
![Worship for the ballot box in hubli](https://etvbharatimages.akamaized.net/etvbharat/prod-images/10020769_hbbl.png)
ಈ ಸುದ್ದಿಯನ್ನೂ ಓದಿ: ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ; ಹಲವಡೆ ಅವಿರೋಧ ಆಯ್ಕೆ
ಮತಗಟ್ಟೆಗೆ ಪೂಜೆ:
ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ಮತಪೆಟ್ಟಿಗೆಗೆ ಪೂಜೆ ನೆರೆವೇರಿಸಿದ ಘಟನೆ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಮತಪೆಟ್ಟಿಗೆಗೆ ಹೂವು ಹಾಕಿ, ಊದುಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಮತಗಟ್ಟೆಗೆ ಪೂಜೆ ಸಲ್ಲಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಶಾಂತ ರೀತಿಯ ಮತದಾನ ನಡೆಯುತ್ತಿದೆ.