ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಸಂದರ್ಭದಲ್ಲಿ ಆಕಸ್ಮಿಕ ಅನಾಹುತ ಜರುಗಿದ್ದು, ಅಂತಾರಾಜ್ಯ ಕಾರ್ಮಿಕನೊಬ್ಬ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಕೋಲ್ಕತ್ತಾ ಮೂಲದ ಅಬ್ದುಲ್ ಗಫರ್ ಎಂಬ ಕಾರ್ಮಿಕನ ಎದೆಯಿಂದ ಕಬ್ಬಿಣ ರಾಡ್ ಸೀಳಿ ಹೊರಬಂದಿದೆ.
ನಗರದ ಹೊಸೂರು ಸರ್ಕಲ್ ಬಳಿ ಫ್ಲೈ ಓವರ್ ಕೆಲಸ ನಡೆಯುತ್ತಿದೆ. ಇಂದು ಮಧ್ಯಾಹ್ನ ಮೇಲಿಂದ ಕಬ್ಬಿಣದ ರಾಡ್ ಅಬ್ದುಲ್ನ ಬಲಗಡೆಯ ಎದೆ ಭಾಗಕ್ಕೆ ಬಿದ್ದು, ಎದೆ ಸೀಳಿ ಹೊರ ಹೋಗಿದೆ. ಘಟನೆ ನಡೆದ ತಕ್ಷಣ ಅಬ್ದುಲ್ನನ್ನು ಸಹ ಕಾರ್ಮಿಕರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಮಿಕ ಪರಿಸ್ಥಿತಿ ನೋಡಿ ವೈದ್ಯರೇ ಬೆಚ್ಚಿ ಬಿದ್ದಿದ್ದು ಚಿಕಿತ್ಸೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ