ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ಕಾಮಗಾರಿ ಮುಂದುವರಿದಿದ್ದು, ಕೆಲ ಮಾರ್ಗಗಳಲ್ಲಿನ ರೈಲುಗಳ ಸಂಚಾರ ಬಂದ್ ಮಾಡಿದೆ. ಇದೀಗ ದೌಂಡ್ - ಮನ್ಮಾಡ್ ವಿಭಾಗದ ಜೋಡಿ ಮಾರ್ಗಕ್ಕೆ ಸಂಬಂಧಿಸಿದಂತೆ ಬೇಲಾಪುರ್, ಚಿತಾಲಿ ಮತ್ತು ಪುತುಂಬಾ ನಿಲ್ದಾಣಗಳ ಮಾರ್ಗದಲ್ಲಿ ಎಂಜಿನಿಯರಿಂಗ್ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಿದರೆ, ಇನ್ನೂ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ಮಧ್ಯೆ ರೈಲ್ವೆ ವಲಯವು ಮಾಹಿತಿ ನೀಡಿದೆ.
ಯಾವುದು ರೈಲು ರದ್ದು: 1. ಮಾರ್ಚ್ 27 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16217 ಮೈಸೂರು ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.
2. ಮಾರ್ಚ್ 28 ರಂದು ಸಾಯಿನಗರ ಶಿರಡಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16218 ಸಾಯಿನಗರ ಶಿರಡಿ ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ರದ್ದು ಮಾಡಲಾಗಿದೆ.
ರೈಲುಗಳ ಮಾರ್ಗ ಬದಲಾವಣೆ:
1.ಮಾರ್ಚ್ 26 ಮತ್ತು 27 ರಂದು ಕೆಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12627 ಕೆ.ಎಸ್.ಆರ್ ಬೆಂಗಳೂರು - ನವದೆಹಲಿ ಕರ್ನಾಟಕ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಪುಣೆ, ಲೋನಾವಾಲ, ವಸಾಯಿ ರೋಡ, ವಡೋದರಾ ಜಂ., ರತ್ಲಾಮ್ ಜಂ. ಮತ್ತು ಸಂತ ಹಿರ್ದರಾಮ್ ನಗರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
2.ಮಾರ್ಚ್ 26 ರಂದು ಹಜರತ್ ನಿಜಾಮುದ್ದೀನ್‌ನಿಂದ ಹೊರಡುವ ರೈಲು ಸಂಖ್ಯೆ 20658 ಹಜರತ್ ನಿಜಾಮುದ್ದೀನ್ - ಎಸ್ ಎಸ್ ಎಸ್ ಹುಬ್ಬಳ್ಳಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲವೂ ಬದಲಾದ ಮಾರ್ಗ ಸಂತ ಹಿರ್ದರಾಮ್ ನಗರ, ರತ್ಲಾಮ್ ಜಂ., ವಡೋದರ ಜಂ., ವಸಾಯಿ ರೋಡ, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
3. ಮಾರ್ಚ್ 26 ಮತ್ತು 27 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ - ವಾಸ್ಕೋ-ಡ-ಗಾಮಾ ಗೋವಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲವೂ ಬದಲಾದ ಮಾರ್ಗ ಮನ್ಮಾಡ್ ಜಂಕ್ಷನ್, ಇಗತ್‌ಪುರಿ, ಪನ್ವೆಲ್, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಚಲಿಸಲಿದೆ.
4. ಮಾರ್ಚ್ 26 ಮತ್ತು 27 ರಂದು ನವದೆಹಲಿಯಿಂದ ಹೊರಡುವ ರೈಲು ಸಂಖ್ಯೆ 12628 ನವದೆಹಲಿ - ಕೆಎಸ್‌ಆರ್ ಬೆಂಗಳೂರು ಕರ್ನಾಟಕ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲವೂ ಬದಲಾದ ಮಾರ್ಗ ಸಂತ ಹಿರ್ದರಾಮ್ ನಗರ, ರತ್ಲಾಮ್ ಜಂ., ವಡೋದರ ಜಂ., ವಸಾಯಿ ರೋಡ, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಚಲಿಸುತ್ತದೆ.
ನೈರುತ್ಯ ರೈಲ್ವೆ ವಲಯದಿಂದ ಕೆಲವು ರೈಲು ರದ್ದು, ಸಂಚಾರದಲ್ಲಿ ಬದಲಾವಣೆ ಇರುವುದರಿಂದ ಪ್ರಯಾಣಿಕರು ಸಹಕರಿಸಬೇಕೆಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.