ETV Bharat / state

ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಕೆಚ್​​ ಹಾಕಿ ಮುಗಿಸಿದ ಪತ್ನಿ! - ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿ

ಅಂಚಟಗೇರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇದೀಗ ಆರೋಪಿಯೊಂದಿಗೆ ಕೊಲೆಯಾದ ವ್ಯಕ್ತಿಯ ಪತ್ನಿ ಕಳೆದ ಐದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.

ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ
Wife murdered her husband
author img

By

Published : Nov 26, 2020, 3:13 PM IST

Updated : Nov 26, 2020, 4:22 PM IST

ಹುಬ್ಬಳ್ಳಿ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು, ಇದೀಗ ಆರೋಪಿಯೊಂದಿಗೆ ಕೊಲೆಯಾದ ವ್ಯಕ್ತಿಯ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿದ ಪತ್ನಿ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ನಿವಾಸಿಯಾದ ಅಕ್ಷತಾ ಎಂಬುವಳನ್ನು ಹಾವೇರಿ ಜಿಲ್ಲೆಯ ಹಾನಗಲ್ಲಿನ ನಿವಾಸಿ ಜಗದೀಶ್ ಎಂಬುವವರಿಗೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಅಕ್ಷತಾಗೆ ಒಂದು ಮಗು ಕೂಡ ಜನಿಸಿದೆ. ಹೀಗಿರುವಾಗ ಗಂಡ ಹೆಂಡತಿ ಮನೆಗೆ ಬಂದಾಗ ದಾರುಣವಾಗಿ ಹತ್ಯೆಯಾಗಿದ್ದ. ಈ ಸಂಬಂಧ ಕಾರ್ಯಪ್ರವೃತ್ತರಾದ ಇನ್ಸ್​ಪೆಕ್ಟರ್ ರಮೇಶ್ ಗೋಕಾಕ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.

ಇದನ್ನೂ ಓದಿ: ಅಂಚಟಗೇರಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಹೆಂಡತಿ ಪ್ರಿಯಕರನಿಂದಲೇ ಗಂಡನ ಕೊಲೆ!!

ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಕೊಲೆಯಾದ ವ್ಯಕ್ತಿಯ ಪತ್ನಿಯ ಮೇಲೆ ಅನುಮಾನ ಮೂಡಿತ್ತು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಇನ್ಸ್​ಪೆಕ್ಟರ್​ ರಮೇಶ ಗೋಕಾಕ, ಅಕ್ಷತಾಳ ಕಾಲ್ ಡಿಟೇಲ್ಸ್ ಕಲೆಹಾಕಿ ನವರಂಗಿ ಆಟ ಆಡಿದ್ದ ಅಕ್ಷತಾ ಹಾಗೂ ಆಕೆಯ ಪ್ರಿಯಕರ ಕಾಶಪ್ಪನನ್ನು ಠಾಣೆಗೆ ಕರೆಸಿಕೊಂಡು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದರು. ಈ ವೇಳೆ ಅಕ್ಷತಾ ಮತ್ತು ಕಾಶಪ್ಪನ ನಡುವೆ ಅನೈತಿಕ ಸಂಬಂಧ ಇರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪತ್ನಿಯನ್ನು ನೋಡಲು ಬಂದ ಪತಿಯ ಬರ್ಬರ ಹತ್ಯೆ: ಕಾರಣ ನಿಗೂಢ!

ಅಕ್ಷತಾ ಪ್ರಿಯಕರ ಕಾಶಪ್ಪ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂಡಕೇರಿ ಗ್ರಾಮದವನು. ಈತ ಕಳೆದ ಐದು ವರ್ಷದಿಂದ ಲೈನ್​​ಮನ್ ಆಗಿ ಅಂಚಟಗೇರಿಯಲ್ಲಿ ಅಕ್ಷತಾಳ ಮನೆ ಮುಂದೆಯೇ ಮನೆ ಮಾಡಿಕೊಂಡಿದ್ದ. ಹೀಗಾಗಿ ಕಳೆದ ಐದು ವರ್ಷದಿಂದ ಕೂಡ ಇವರಿಬ್ಬರ ನಡುವೆ ಸಂಬಂಧ ಇತ್ತು. ಜೊತೆಗೆ ಕಾಶಪ್ಪನಿಗೆ ಕಳೆದ ನಾಲ್ಕು ತಿಂಗಳ ಹಿಂದೆ ವಿವಾಹವಾಗಿತ್ತು. ಇನ್ನು ನಮ್ಮ ಸಂಬಂಧ ಮುಂದುವರೆಯಬೇಕಾದ್ರೆ ತಮಗೆ ಅಡ್ಡವಾಗಿರುವ ಜಗದೀಶನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿ ಕಳೆದ ಮಂಗಳವಾರ ಕಾಶಪ್ಪ ಜಗದೀಶ್​​ನಿಗೆ ಎಣ್ಣೆ ಪಾರ್ಟಿ ಕೊಡಿಸಿ ಊರಿನ ಹೊರವಲಯದ ಚೆನ್ನಾಪುರ ಕ್ರಾಸ್ ಬಳಿ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ.

ಆದರೆ ಅಕ್ರಮ ಸಂಬಂಧದ ಬಗ್ಗೆ ಅಕ್ಷತಾ, ಜಗದೀಶ್ ಮನೆಯವರಿಗೆ ಯಾವುದೇ ಸುಳಿವು ಬಿಟ್ಟು ‌ಕೊಟ್ಟಿರಲಿಲ್ಲವಂತೆ. ಮನೆಯವರ ಜೊತೆ ಚೆನ್ನಾಗಿಯೇ ಇದ್ದಳು. ಆದ್ರೆ ಹೆರಿಗೆಗೆಂದು ಬಂದವಳು ತಮ್ಮ ಸಹೋದರನ ಹತ್ಯೆಯಲ್ಲಿ ಕೈ ಜೋಡಿಸಿದ್ದಕ್ಕೆ ಜಗದೀಶ್ ಕುಟುಂಬದವರು ಮರಗುತ್ತಿದ್ದಾರೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆಯ ಪೊಲೀಸರು, ಹಗಲು ರಾತ್ರಿ ಎನ್ನದೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಕೇವಲ 24 ಗಂಟೆಗಳಲ್ಲಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Last Updated : Nov 26, 2020, 4:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.