ETV Bharat / state

ವರದಕ್ಷಿಣೆ ತರಲು ತಡಮಾಡಿದಳೆಂಬ ಕಾರಣಕ್ಕೆ ಪಾಪಿ ಪತಿ ಮಾಡಿದ್ದೇನು ಗೊತ್ತಾ? - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಪತಿ ವರದಕ್ಷಿಣೆ ತರಲು ತಡಮಾಡಿದಳೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ ಮಾರಣಾಂತಿಕ ಹಲ್ಲೆ ‌ಮಾಡಿ ಪರಾರಿಯಾಗಿದ್ದಾನೆ.

ಪತಿಯಿಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Mar 17, 2019, 5:55 PM IST

ಹುಬ್ಬಳ್ಳಿ: ವರದಕ್ಷಿಣೆ ತರಲು ತಡಮಾಡಿದಳೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ ತವರಿಗೆ ಬಂದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ‌ಮಾಡಿ ಪರಾರಿಯಾಗಿರುವ ಘಟನೆ ಆನಂದ ನಗರದಲ್ಲಿ ನಡೆದಿದೆ.

ಹಳೆಹುಬ್ಬಳ್ಳಿಯ ಆನಂದನಗರದ ಯುವತಿವೋರ್ವಳನ್ನು ಐದು ವರ್ಷಗಳ ಹಿಂದೆ ಷರೀಫ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದ್ರೆ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆಗಾಗಿ ಪ್ರತಿನಿತ್ಯವೂ ಪೀಡಿಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಪತಿ ವರದಕ್ಷಿಣೆ ತರುವಂತೆ ಪತ್ನಿಯನ್ನು ತವರುಮನೆಗೆ ಕಳುಹಿಸಿದ್ದ. ಆದ್ರೆ ತವರಿಗೆ ಬಂದ ಪತ್ನಿ ವರದಕ್ಷಿಣೆ ತರಲು ತಡ ಮಾಡಿದಕ್ಕೆ ತವರು ಮನೆಗೇ ಬಂದ ಪತಿ, ಹೆಂಡತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ‌‌.

ಗಾಯಗೊಂಡಿರುವ ಮಹಿಳೆಯನ್ನು ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.