ETV Bharat / state

ಉಪ್ಪು ತಿಂದವರು ನೀರು ಕುಡಿಯಲೇಬೇಕು, ಡಿಕೆಶಿ ಬಂಧನದಲ್ಲಿ ರಾಜಕೀಯವಿಲ್ಲ: ಪ್ರಲ್ಹಾದ್ ಜೋಶಿ - ಬಿಜೆಪಿ ಪಕ್ಷ

ಹುಬ್ಬಳ್ಳಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಹಾನಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್​​ ಈವರೆಗೆ ಎಷ್ಟು ಹಣದ ವ್ಯವಹಾರಗಳನ್ನು ಮಾಡಿದ್ದಾರೆಂಬ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.

ಪ್ರಲ್ಹಾದ್ ಜೋಶಿ
author img

By

Published : Aug 30, 2019, 5:37 PM IST

ಹುಬ್ಬಳ್ಳಿ: ಆಪರೇಷನ್ ಕಮಲದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಆಪರೇಷನ್ ಕಮಲ ನಡೆದೇ ಇಲ್ಲ. ಆಗದೇ ಇರುವ ಆಪರೇಷನ್ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದಾರೆ. ಅವರ ಶಾಸಕರನ್ನು ಸಂರಕ್ಷಣೆ ಮಾಡಿದಕ್ಕೆ ರೇಡ್ ಆಗಿದೆ ಎಂಬುವುದು ಶುದ್ಧ ಸುಳ್ಳು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ನಗರದಲ್ಲಿಂದು ಪ್ರವಾಹ ಪೀಡಿತ ಪ್ರದೇಶಗಳ ಹಾನಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ. ಶಿವಕುಮಾರ್​​ ಈವರೆಗೆ ಎಷ್ಟು ಹಣದ ವ್ಯವಹಾರಗಳನ್ನು ಮಾಡಿದ್ದಾರೆಂಬ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದಾರೆ. ನಂತರ ಪೂರ್ಣ ಪ್ರಮಾಣದ ತನಿಖೆಗಾಗಿ ಇಡಿಗೆ ಹಸ್ತಾಂತರಿಸಲಾಗಿದೆ. ಇಡಿ ವಿಚಾರಣೆ ಕುರಿತಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್​​ ಬಿಜೆಪಿ ಮೇಲೆ ಮಾಡಿದ ಆರೋಪ ಶುದ್ಧ ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.

ಉಪ್ಪು ತಿಂದವರು ನೀರು ಕುಡಿಯಲೇ ಬೇಕು -ಜೋಶಿ

ಮೈತ್ರಿ ಸರ್ಕಾರ ಪತನಕ್ಕೆ ಕಾರಣವನ್ನು ಈಗಾಗಲೇ ಹೆಚ್.ಡಿ. ದೇವೆಗೌಡ, ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ವಿದೇಶದಲ್ಲಿ ಮೋಜು ಮಸ್ತಿ ಮಾಡುತ್ತಿರುವುದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಇದರಿಂದ ಈ ಹಿಂದೆ ಅಧಿಕಾರದಲ್ಲಿದ್ದವರಿಗೆ ರಾಜ್ಯದ ಬಗ್ಗೆ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ರಾಜ್ಯದಲ್ಲಿ ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಮಲೇಶಿಯಾದಲ್ಲಿ ಮೋಜು ಮಸ್ತಿಯಲ್ಲಿ ಮುಳುಗಿದ್ದಾರೆ. ಇದು ದೊಡ್ಡ ದುರಂತದ ಸಂಗತಿ ಎಂದರು.

ಇನ್ನೂ ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ನಮ್ಮ ಹೈಕಮಾಂಡ್ ನಿರ್ಣಯದಂತೆ ಬಿಜೆಪಿಯ ಎಲ್ಲ ಶಾಸಕರು ಹಾಗೂ ನಾಯಕರು ನಡೆದುಕೊಳ್ಳುತ್ತಾರೆ.ಈ ಮೂಲಕ‌ ಸಂಪೂರ್ಣ ನಾಲ್ಕು ವರ್ಷಗಳ ಕಾಲ ಸರ್ಕಾರ ಸುಗಮವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಹುಬ್ಬಳಿBody:ಸ್ಲಗ್: ಉಪ್ಪು ತಿಂದವರು ನೀರು ಕುಡಿಯಲೆಬೇಕು....ಜೋಶಿ.

ಹುಬ್ಬಳ್ಳಿ:- ಆಪರೇಷನ್ ಕಮಲದಲ್ಲಿ ಯಾವುದೇ ರೀತಿಯ ಉರುಳಿಲ್ಲ ಆಪರೇಷನ್ ಕಮಲ ನಡದೇ ಇಲ್ಲ. ಆಗದೇ ಇರುವ ಆಪರೇಷನ್ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದಾರೆ. ಅವರ ಶಾಸಕರಗಳನ್ನು ಸಂರಕ್ಷಣೆ ಮಾಡಿದಕ್ಕೆ ರೇಡ್ ಆಗಿದೆ ಎಂಬುವುದು ಶುದ್ದ ಸುಳ್ಳು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಪ್ರವಾಹ ಪೀಡಿತ ಪ್ರದೇಶಗಳ ಹಾನಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ನಂತರ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ ಈವರೆಗೆ ಎಷ್ಟ ಎಷ್ಟು ದುಡ್ಡು ವ್ಯವಹಾರಗಳನ್ನು ಮಾಡಿದ್ದಾರೆಂಬ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದರು. ನಂತರ ಪೂರ್ಣ ಪ್ರಮಾಣದ ತನಿಖೆಗಾಗಿ ಇಡಿಗೆ ಹಸ್ತಾಂತರಿಸಲಾಗಿದೆ. ಇಡಿ ವಿಚಾರಣೆ ಕುರಿತಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಿಜೆಪಿ ಮೇಲೆ ಮಾಡಿದ ಆರೋಪ ಶುದ್ದ ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು. ಮೈತ್ರಿ ಸರ್ಕಾರ ಪತನಕ್ಕೆ ಕಾರಣವನ್ನು ಈಗಾಗಲೇ ಹೆಚ್.ಡಿ.ದೇವೆಗೌಡ, ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ವಿದೇಶದಲ್ಲಿ ಮೋಜು ಮಸ್ತಿ ಮಾಡುತ್ತಿರುವುದನ್ನು ಮಾಧ್ಯಮದಲ್ಲಿ ನೋಡಿದ್ದೆನೆ. ಇದರಿಂದ ಈ ಹಿಂದೆ ಅಧಿಕಾರದಲ್ಲಿದ್ದವರಿಗೆ ರಾಜ್ಯದ ಬಗ್ಗೆ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ರಾಜ್ಯದಲ್ಲಿ ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಮಲೇಶಿಯಾದಲ್ಲಿ ಮೋಜು ಮಸ್ತಿಯಲ್ಲಿ ಮುಳುಗಿದ್ದಾರೆ. ಇದು ದೊಡ್ಡ ದುರಂತದ ಸಂಗತಿ ಎಂದರು.ಇನ್ನೂ ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ನಮ್ಮ ಹೈಕಮಾಂಡ್ ನಿರ್ಣಯದಂತೆ ಬಿಜೆಪಿಯ ಎಲ್ಲರು ಶಾಸಕರು ಹಾಗೂ ನಾಯಕರು ನಡೆದುಕೊಳ್ಳುತ್ತಾರೆ.ಈ ಮೂಲಕ‌ ಸಂಪೂರ್ಣ ನಾಲ್ಕು ವರ್ಷಗಳ ಕಾಲ ಸರಕಾರ ಸುಗಮವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

__________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.