ಧಾರವಾಡ: ನಾನು ಜಿಲ್ಲಾಧಿಕಾರಿ ಆಗಿದ್ದಾಗಲೇ ರಾಜೀನಾಮೆ ನೀಡಿದ್ದು ಪ್ರತಿಭಟನಾ ರಾಜೀನಾಮೆ ಅಂತಾ ಆಗುತ್ತೆ. ಮೇಲ್ನೋಟಕ್ಕೆ ಎಲ್ಲಾ ಚೆನ್ನಾಗಿಯೇ ನಡೆಯುತ್ತಿದೆ ಎಂದು ಕಂಡುಬರುತ್ತಿದೆ. ಆದ್ರೆ ಏನೂ ಸರಿಯಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಸಂದೇಶ ನೀಡಲು ರಾಜೀನಾಮೆ ನೀಡಿದ್ದೇನೆ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೆಳಹಂತದಲ್ಲಿ ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಅಂದ್ರೆ ಜಿಲ್ಲಾಧಿಕಾರಿಯಾಗಿದ್ದ ನನಗೇ ನಿದ್ದೆ ಕೂಡಾ ಬರುತ್ತಿರಲಿಲ್ಲ ಅಷ್ಟು ಕೆಟ್ಟು ಹೋಗಿದೆ. ಜನರಿಗೆ ಏನಾದರೂ ಸಮಸ್ಯೆಯಾಗುತ್ತಾ? ನಾಳೆ ಹೇಗೆ ಬಗೆಹರಿಸೋದು ಅಂತ ಚಿಂತೆ ಮಾಡುತ್ತಿದ್ದೆವು ಎಂದು ಮನದಾಳದ ಮಾತು ಹಂಚಿಕೊಂಡರು.
ಶಾಂತಿ ಸುವ್ಯವಸ್ಥೆ ಕಾಪಾಡಲು ಚಿಂತೆ ಮಾಡುತ್ತಿದ್ದೆವು. ಈ ರೀತಿಯಾಗಿ ಆರು ವರ್ಷ ಕೆಲಸ ಮಾಡಿದ ಮೇಲೆ ಒಬ್ಬರ ಮೇಲೊಬ್ಬರಿಗೆ ಎತ್ತಿ ಕಟ್ಟುವುದನ್ನು ನೋಡಿ ಏನೂ ವಿಚಾರ ಮಾಡೋಕೆ ಆಗುತ್ತಿರಲಿಲ್ಲ. ಬದಲಾವಣೆ ಮಾಡಲಿಕ್ಕೆ ಯಾವುದೇ ಮಾರ್ಗ ಇರಲಿಲ್ಲ. ಹಿಂದೂ, ಹಿಂದುತ್ವದ ವಿಷಯಗಳನ್ನು ಬಿಟ್ಟು ನಾವು ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಅಲ್ಲದೆ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳೋದಕ್ಕೆ ಹೋರಾಟ ಮಾಡಬೇಕಿದೆ. ಹೋರಾಟ ಮಾಡಿ ಜೈಲಿಗೆ ಹೋಗೋ ಪರಿಸ್ಥಿತಿ ಬಂದರೆ ಏನು ತ್ಯಾಗ ಇದ್ದರೂ ಮಾಡಲೇಬೇಕು ಎಂದರು.