ಹುಬ್ಬಳ್ಳಿ: ಕುಡಿಯುವ ನೀರಿನ ಪೈಪ್ ಒಡೆದು ಪೆಟ್ರೋಲ್ ಬಂಕ್ ಒಳಗಡೆ ನೀರು ನುಗ್ಗಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ದೇಸಾಯಿ ಸರ್ಕಲ್ ಬಳಿಯಿರುವ ಪೆಟ್ರೋಲ್ ಬಂಕ್ನಲ್ಲಿನ ರಸ್ತೆ ಪಕ್ಕದಲ್ಲಿರುವ ಕುಡಿಯುವ ನೀರಿನ ಪೈಪ್ ಒಡೆದ ಪರಿಣಾಮ ಬಂಕ್ ತುಂಬಾ ನೀರು ತುಂಬಿದ್ದು, ಮಾಲೀಕನಿಗೆ ಆತಂಕ ಮೂಡಿಸಿದೆ.
ನೀರಿನ ಪೈಪ್ ಒಡೆದ ತಕ್ಷಣವೇ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದರೂ ಸಹ ಅವರು ಸರಿಯಾದ ಸಮಯಕ್ಕೆ ಆಗಮಿಸದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನೀರು ಜಾಸ್ತಿಯಾಗಿ ಪೆಟ್ರೋಲ್ ಟ್ಯಾಂಕಿಗೆ ನೀರು ನುಗ್ಗಿದೆ ಎನ್ನಲಾಗಿದೆ.