ಧಾರವಾಡ: ನಗರದ ಸಪ್ತಾಪುರ ಬಡಾವಣೆಯಲ್ಲಿನ ಶ್ರೀ ಸತ್ಯ ಸಾಯಿಬಾಬಾ ದೇವಸ್ಥಾನದಲ್ಲಿನ ಸಾಯಿಬಾಬಾ ಭಾವಚಿತ್ರದಿಂದ ನೀರು ಬರುತ್ತಿದೆಯಂತೆ. ಹೀಗಂತಾ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಭಕ್ತರ ಅಚ್ಚರಿಗೆ ಕಾರಣವಾಗಿದೆಯಂತೆ.
ಘಟನೆ ಬಗ್ಗೆ ಭಕ್ತರಿಗೆ ಮಾಹಿತಿ ಸಿಗುತ್ತಿದ್ದಂತೆಯೇ ದೇವಸ್ಥಾನಕ್ಕೆ ಭೇಟಿ ನೀಡಿ, ಸತ್ಯ ಸಾಯಿ ಬಾಬಾ ದರ್ಶನ ಪಡೆಯುತ್ತಿದ್ದಾರೆ. ಗುರುವಾರ ಸಂಜೆ ಪೂಜೆಯ ಸಮಯದಲ್ಲಿ ಭಾವಚಿತ್ರದ ಮೂಲಕ ನೀರು ಬರುತ್ತಿದೆ ಎಂಬ ವಿಡಿಯೋ ಹರಿದಾಡಿದೆ.