ETV Bharat / state

ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆ: ಕಟ್ಟುನಿಟ್ಟಿನ ಕ್ರಮ ಕೈಗೊಂಡ ಆಸ್ಪತ್ರೆಗಳು - ಹೊರ ರೋಗಿಗಳ ವಿಭಾಗ ಆರಂಭ

ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಕಾರಣ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದ್ದು, ಹುಬ್ಬಳ್ಳಿಯಲ್ಲಿ ಕಿಮ್ಸ್, ಚಿಟಗುಪ್ಪಿ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಿನ‌ ಕ್ರಮ ಕೈಗೊಂಡಿವೆ.

OPD
ಹೊರ ರೋಗಿಗಳ ವಿಭಾಗ
author img

By

Published : Dec 7, 2020, 9:29 PM IST

ಹುಬ್ಬಳ್ಳಿ: ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗಗಳು ಸೇವೆ ಪುನರ್​ ಆರಂಭಿಸಿದ್ದು, ಕೋವಿಡೇತ್ತರ ರೋಗಿಗಳು ತುಂಬಿ ತುಳುಕುತ್ತಿದ್ದಾರೆ. ಅದರಲ್ಲೂ ಕೆಲವರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿದರೆ, ಇನ್ನೂ ಕೆಲವರು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ...ಗ್ರಾಪಂ ಚುನಾವಣೆ: ಆಯುಧಗಳನ್ನು ಠಾಣೆಗಳಲ್ಲಿ ಜಮೆ ಮಾಡಲು ಡಿಸಿ ಆದೇಶ

ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದ್ದು, ಹುಬ್ಬಳ್ಳಿಯಲ್ಲಿ ಕಿಮ್ಸ್, ಚಿಟಗುಪ್ಪಿ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಿನ‌ ಕ್ರಮ ಕೈಗೊಂಡಿವೆ. ಖಾಸಗಿ ಆಸ್ಪತ್ರೆಗಳು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಥರ್ಮಲ್​​ ಸ್ಕ್ಯಾನಿಂಗ್ ನಡೆಸುವುದನ್ನು ನಿಲ್ಲಿಸಲಾಗಿದೆ.

ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆ

ಕಿಮ್ಸ್​​ನ ಒಪಿಡಿಗಳಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿದ್ದು, ಚೀಟಿ ಪಡೆಯಲು ಮುಗಿಬೀಳುವುದನ್ನು ತಪ್ಪಿಸಲು ಕೆಲವೇ ಜನರನ್ನು ಒಳಗೆ ಬಿಡಲಾಗುತ್ತಿದೆ. ಸಾರ್ವಜನಿಕರು‌ ನೆಗಡಿ, ಶೀತ, ಜ್ವರ ಕಾಣಿಸಿಕೊಂಡರೆ ಆಸ್ಪತ್ರೆಗೆ ಆಗಮಿಸಿ ಪರೀಕ್ಷೆಗೆ ಒಳಪಡಬೇಕು. ಈ ಮೂಲಕ ಕೊರೊನಾ ಎರಡನೇ ಅಲೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.