ಹುಬ್ಬಳ್ಳಿ : ನಗರದ ರೈಲ್ವೆ ಮೈದಾನದಲ್ಲಿ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಹಾಗೂ ಸಾಮಾಜಿಕ ಅಂತರ ಉಲ್ಲಂಘನೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಕೋವಿಡ್ ಕಾರಣದಿಂದ ದೊಡ್ಡ ಸಭೆ ಸಮಾರಂಭಗಳನ್ನು ಜಿಲ್ಲಾಡಳಿತ ರದ್ದು ಮಾಡುತ್ತದೆ. ಸಾಂಪ್ರದಾಯಿಕವಾಗಿ ಕೋವಿಡ್ ನಿಯಮಪಾಲಿಸಿ ಜಾತ್ರೆ ಸಭೆ ಸಮಾರಂಭ ಆಯೋಜನೆಗೆ ಅನುಮತಿ ನೀಡಲಾಗುತ್ತದೆ. ಆದರೆ, ರಾಬರ್ಟ್ ಚಿತ್ರದ ಆಡಿಯೋ ಲಾಂಚ್ ವೇಳೆ ಕೋವಿಡ್ ನಿಯಮಗಳನ್ನ ಆಯೋಜಕರು ಪಾಲಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು 40-50 ಸಾವಿರ ಜನ ಸೇರಿದ್ದರು, ಕೋವಿಡ್ ನಿಯಮ ಸಹ ಪಾಲನೆ ಆಗಿಲ್ಲ. ಹೀಗಿದ್ದರೂ ಕೂಡಾ ಯಾರ ಮೇಲೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದ್ದು, ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನವ್ಯಕ್ತವಾಗಿದೆ.
ಓದಿ: ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ: ಡೈಲಾಗ್ ಹೊಡೆದು ಮನರಂಜಿಸಿದ ಶಂಕರ್, ವಿನೋದ್
ಜಗದೀಶ್ ಶೆಟ್ಟರ್ ದ್ವಂದ್ವ ಹೇಳಿಕೆ : ನಾನು ರಾಬರ್ಟ್ ಸಿನಿಮಾ ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಯಾವುದೇ ಸೋಶಿಯಲ್ ಡಿಸ್ಟೆನ್ಸ್ ಇರಲಿಲ್ಲ. ಯಾರಿಗೆ ಹೇಳೋದು..? 30-40 ಸಾವಿರ ಜನ ಸೇರಿದ್ದರು, ಯಾರಿಗೆ ಹೇಳಬೇಕು - ಅವರೇ ಅರ್ಥ ಮಾಡ್ಕೋಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ, ಜನ ಜಾಗೃತರಾಗಬೇಕು ಎಂದಿದ್ದಾರೆ.