ETV Bharat / state

ಈರುಳ್ಳಿ.. ಈರುಳ್ಳಿ... ರೈತನ ಬೆನ್ನಟ್ಟಿದ ಕಳ್ಳರು: ಸಿಕ್ಕಾಕಿಕೊಂಡ ಖದೀಮರಿಗೆ ಆದ ಗತಿ ಏನು? - ಧಾರವಾಡ ಕ್ರೈಂ ಲೆಟೆಸ್ಟ್​ ನ್ಯೂಸ್​​

ಕೆಲ ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಇದರ ಜೊತೆಗೆ ಕಳ್ಳರ ಕಾಟ ಕೂಡ ಹೆಚ್ಚಾಗಿದೆ. ಈರುಳ್ಳಿ ಮಾರಾಟ ಮಾಡಿ ಹಣ ಪಡೆದುಕೊಂಡು ಬರುತ್ತಿದ್ದ ರೈತನನ್ನು ತಡೆದು ಹಣ ದೋಚಿ ಪರಾರಿಯಾಗುತ್ತಿದ್ದ ಖದೀಮರನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

accused
ಆರೋಪಿಗಳು
author img

By

Published : Nov 30, 2019, 9:54 AM IST

Updated : Nov 30, 2019, 1:37 PM IST

ಧಾರವಾಡ: ಈರುಳ್ಳಿ ಮಾರಾಟ ಮಾಡಿ ಹಣ ಪಡೆದು ವಾಪಸ್ ಆಗುತ್ತಿದ್ದ ರೈತನ ಬಳಿಯಿದ್ದ ಹಣ ಕಿತ್ತುಕೊಂಡು ಹೋಗುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಈರುಳ್ಳಿ ಮಾರಿ ಬರುತ್ತಿದ್ದ ರೈತನ ಬೆನ್ನಟ್ಟಿದ ಕಳ್ಳರು

ಧಾರವಾಡದಿಂದ ವನಹಳ್ಳಿಗೆ ಹೊರಟ ರೈತನನ್ನು ಇಬ್ಬರು ಹಿಂಬಾಲಿಸಿದ್ದು, ನಿರ್ಜನ ಪ್ರದೇಶದಲ್ಲಿ ರೈತನಿಗೆ ಹೊಡೆದು ಅವರ ಬಳಿಯಿದ್ದ 10 ಸಾವಿರ ರೂ. ಕಿತ್ತುಕೊಂಡು ಕಳ್ಳರು ಪರಾರಿಯಾಗುತ್ತಿದ್ದರು. ಇದನ್ನು ಕಂಡು ಅನುಮಾನಗೊಂಡ ಹೆಬ್ಬಳ್ಳಿ ಗ್ರಾಮಸ್ಥರು ಈ ಇಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ ರೈತನ ಹಣ ಕಿತ್ತುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದಾರೆ. ಬಳಿಕ ಈ ಖದೀಮರಿಗೆ ಥಳಿಸಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಧಾರವಾಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Intro:ಧಾರವಾಡ: ಈರುಳ್ಳಿ ಬೆಲೆ ಹೆಚ್ಚಾಗುತ್ತಿದಂತೆ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಈರುಳ್ಳಿ ಮಾರಾಟ ಮಾಡಿ ಹಣ ಪಡೆದು ವಾಪಸ್ ಆಗುತ್ತಿದ್ದ ರೈತನನ್ನು ಕಳ್ಳರು ಬೆನ್ನಟ್ಟಿದ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ..

ನಿರ್ಜನ ಪ್ರದೇಶದಲ್ಲಿ ರೈತನಿಗೆ ಹೊಡೆದು ಹಣ ಕಿತ್ತುಕೊಂಡು ಓಡುತ್ತಿರುವ ಕಳ್ಳರನ್ನು ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ. ಧಾರವಾಡದಿಂದ ವನಹಳ್ಳಿಗೆ ಹೊರಟ ರೈತನನ್ನು ಕಳ್ಳರು ಹಿಂಬಾಲಿಸಿದ್ದಾರೆ.Body:ನಿರ್ಜನ ಪ್ರದೇಶದಲ್ಲಿ ರೈತನಿಗೆ ಹೊಡೆದು ಅವನಲ್ಲಿದ್ದ ೧೦ ಸಾವಿರ ರೂಪಾಯಿ ಕಿತ್ತುಕೊಂಡ ಕಳ್ಳರು ಹಣ ಕಿತ್ತುಕೊಂಡು ಓಡುತ್ತಿರುವಾಗ ಅನುಮಾನ ಬಂದು ಹೆಬ್ಬಳ್ಳಿ ಗ್ರಾಮಸ್ಥರು ಇಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ ರೈತನಲ್ಲಿನ ಹಣ ಕಿತ್ತುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಇಬ್ಬರಿಗೆ ಗ್ರಾಮಸ್ಥರು ಗೂಸಾ ನೀಡಿದ್ದಾರೆ.

ಗೂಸಾ ನೀಡಿ ಗ್ರಾಮದಲ್ಲಿ‌ ಕೂಡಿಹಾಕಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಭವಿಸಿದೆ.Conclusion:
Last Updated : Nov 30, 2019, 1:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.