ETV Bharat / state

ಫೆ.2ಕ್ಕೆ ಹುಬ್ಬಳ್ಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಫೆಬ್ರವರಿ 2ರಂದು, ಹುಬ್ಬಳ್ಳಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

vice-president-venkaiah-naidu-will-visit-hubli
ಅಧಿಕಾರಿಗಳಿಂದ ಪೂರ್ವ ಸಿದ್ಧತೆ
author img

By

Published : Jan 21, 2020, 8:59 PM IST

ಹುಬ್ಬಳ್ಳಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಫೆಬ್ರವರಿ 2ರಂದು, ಹುಬ್ಬಳ್ಳಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ , ಹೆಚ್​​ಡಿಬಿಆರ್​​ಟಿಎಸ್ ಹಾಗೂ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳ ಭೇಟಿ ಮಾಡಿ ಪರಿಶೀಲನೆ ನಡೆಸಿತು.

ಅಧಿಕಾರಿಗಳಿಂದ ಪೂರ್ವ ಸಿದ್ಧತೆ

ದೇಶಪಾಂಡೆ ಫೌಂಡೇಷನ್​​ನ ಸ್ಕಿಲ್ ಗುರುಕುಲ ಸ್ಟಾರ್ಟ್ ಅಪ್ ಕಾರ್ಯಕ್ರಮ ಹಾಗೂ ಹುಬ್ಬಳ್ಳಿ ಧಾರವಾಡ ಬಿಆರ್​​ಟಿಎಸ್ ಪ್ರಾಜೆಕ್ಟ್ ಉದ್ಘಾಟನೆ, ನವ ನಗರದ ಬಸ್ ನಿಲ್ದಾಣ ಭೇಟಿ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಗ್ರಾಮಾಂತರ ಬಸ್​​ಗಳ ಕಾರ್ಯಾಚರಣೆ ಪ್ರಾರಂಭಿಸುವ ಕಾರ್ಯಕ್ರಮಗಳ ಸ್ಥಳ , ವೇದಿಕೆ, ಭದ್ರತೆ, ವೈದ್ಯಕೀಯ, ಸಂಚಾರ ವ್ಯವಸ್ಥೆ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಸಿದರು.

Intro:ಹುಬ್ಬಳ್ಳಿ -05

ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಅವರು ಫೆ.2 ರಂದು ಹುಬ್ಬಳ್ಳಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ , ಹೆಚ್ ಡಿ ಬಿಆರ್ ಟಿಎಸ್ ಹಾಗೂ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳ ತಂಡ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದೇಶಪಾಂಡೆ ಫೌಂಡೇಶನ್ ನ ಸ್ಕಿಲ್ ಗುರುಕುಲ ಸ್ಟಾರ್ಟ್ ಅಪ್ ಕಾರ್ಯಕ್ರಮ ಹಾಗೂ ಹುಬ್ಬಳ್ಳಿ ಧಾರವಾಡ ಬಿಆರ್ ಟಿ ಎಸ್ ಪ್ರಾಜೆಕ್ಟ್ ಉದ್ಘಾಟನೆ, ನವನಗರದ ಬಸ್ ನಿಲ್ದಾಣ ಭೇಟಿ,ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ವಾಕರಸಾಸಂ ಗ್ರಾಮಾಂತರ ಬಸ್ ಗಳ ಕಾರ್ಯಾಚರಣೆ ಪ್ರಾರಂಭಿಸುವ ಕಾರ್ಯಕ್ರಮಗಳ ಸ್ಥಳ ,ವೇದಿಕೆ,ಭದ್ರತೆ, ವೈದ್ಯಕೀಯ, ಸಂಚಾರ ವ್ಯವಸ್ಥೆ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಸಿದರು.

ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್,ಜಿಪಂ ಉಪಕಾರ್ಯದರ್ಶಿ ಎಸ್.ಜಿ.ಕೊರವರ್, ಡಿಸಿಪಿ ನಾಗೇಶ,ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ವಿರೂಪಾಕ್ಷ ಯಮಕನಮರಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ.ಡಿ.ನಾಯಕ್, ಅಪ್ಪಯ್ಯ ನಾಲತ್ವಾಡಮಠ, ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಭೀಮಪ್ಪ, ಬಿಆರ್ ಟಿಎಸ್ ನ ವಿವೇಕಾನಂದ ವಿಶ್ವಜ್ಞ, ಡಿಎಚ್ ಓ ಡಾ.ಯಶವಂತ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಕೆ.ಮಾನಕರ್, ತಹಸೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.