ETV Bharat / state

ಜನರ ಮನದಲ್ಲಿ ಅರವಿಂದ ಬೆಲ್ಲದ್​ ಹೆಸರೇ ಕಾಂಕ್ರೀಟ್ ಆಗಿಬಿಟ್ಟಿದೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ - aravind bellad

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತಯಾಚನೆ ಮಾಡಿದರು.

Union Minister Smriti Irani campaign for Arvind Bellad
ಕೇಂದ್ರ ಸಚಿವೆ ಸ್ಮೃತಿ ಇರಾನಿ
author img

By

Published : Apr 25, 2023, 9:23 PM IST

ಕೇಂದ್ರ ಸಚಿವೆ ಸ್ಮೃತಿ ಇರಾನಿ

ಧಾರವಾಡ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್ ಅವರು ಕ್ಷೇತ್ರದ ತುಂಬೆಲ್ಲ ಕಾಂಕ್ರೀಟ್​ ರಸ್ತೆ ಮಾಡಿಸಿದ್ದಾರೆ. ಹಾಗಾಗಿ, ಜನರ ಮನದಲ್ಲಿ ಅರವಿಂದ ಅವರ ಹೆಸರು ಕಾಂಕ್ರೀಟ್ ರೀತಿ ಗಟ್ಟಿಯಾಗಿ ಉಳಿದುಕೊಂಡಿದೆ. ಈ ಚುನಾವಣೆಯಲ್ಲಿ ಅರವಿಂದ ಅವರ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಶ್ವಾಸ ವ್ಯಕ್ತಪಡಿಸಿದರು.

ಸನ್ನಿಧಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆ, ಬಿಜೆಪಿ ಕಾರ್ಯಕರ್ತೆಯಾಗಿ ಮಾತನಾಡುತ್ತಿಲ್ಲ, ಬದಲಾಗಿ ಸಾಮಾನ್ಯ ಮಹಿಳೆಯಾಗಿ ಮಾತನಾಡುತ್ತಿದ್ದೇನೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದರು. ದೇಶದ ಹಿತ ಕಾಪಾಡುವುದರಲ್ಲಿ ಉಳಿದ ರಾಜಕೀಯ ಪಕ್ಷಗಳಿಂದ ಬಿಜೆಪಿ ಭಿನ್ನ. ಹಾಗಾಗಿ ರಾಜ್ಯದ ಜನ ಸಮರ್ಥ ನಾಯಕನ ಕೈಯನ್ನು ಮತ್ತಷ್ಟು ಬಲಪಡಿಸಬೇಕು. ಮಹಿಳೆಯರ ಉಜ್ಬಲ ಭವಿಷ್ಯಕ್ಕಾಗಿ ಬಿಜೆಪಿಯೇ ಭರವಸೆ ಎಂದು ಪಕ್ಷದ ಸಾಧನೆಯನ್ನು ಕೊಂಡಾಡಿದರು.

ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ ಆರೋಪ

ಇದು ಬಿಜೆಪಿ ಚುನಾವಣೆಯಲ್ಲ, ಇದು ಕರ್ನಾಟಕd ಮಹಿಳೆಯರ ಚುನಾವಣೆ. ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪರಾರಿಯಾಗಿದ್ದರು. ಈಗ ಮತ ಕೇಳಲು ಬರುತ್ತಿದ್ದಾರೆ. ರಾಹುಲ್ ಗಾಂಧಿ ಕ್ಷೇತ್ರದಲ್ಲೇ ವಿದ್ಯುತ್ ಇರಲಿಲ್ಲ, ಶೌಚಾಲಯ ಇರಲಿಲ್ಲ, ಸೂರು ಇರಲಿಲ್ಲ. ಹುಬ್ಬಳ್ಳಿ-ಧಾರವಾಡ ಜನತೆಗೆ ಎಲ್ಲವೂ ಗೊತ್ತಿದೆ. ಬಿಜೆಪಿಯಲ್ಲಿ ಕೆಲವರಿಗೆ ಸ್ಥಾನ‌ಮಾನ, ಅಧಿಕಾರ ಎಲ್ಲವೂ ನೀಡಿದ್ದರೂ ಬೇರೆಯವರನ್ನು ಅಪ್ಪಿಕೊಂಡಿದ್ದಾರೆ. ನಮ್ಮವರೇ ನಮ್ಮನ್ನು ಬಿಟ್ಟು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಶೆಟ್ಟರ್ ವಿರು ಹರಿಹಾಯ್ದರು.

ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಅನ್ನೋದು ಎಲ್ಲರಿಗೂ ಅರ್ಥವಾಗಿದೆ. ತಮ್ಮ ಕುಟುಂಬ ಹಾಗೂ ಧರ್ಮದವರಿಗೆ ಆಗದೇ ಇರುವಂತವರು ಜನತೆಗೆ ಏನು ಮಾಡಬಲ್ಲರು? ಅಂತವರಿಗೆ ಜನರು ತಕ್ಕ ಪಾಠ ಕಲಿಸಲೇಬೇಕು. ನಮ್ಮ ಜೊತೆ ಇದ್ದಾಗ ಮುಖ್ಯಮಂತ್ರಿಯಾಗಿದ್ದರು, ಈಗ ತಮ್ಮ ದುರಾಸೆಯ ಬೇಳೆ ಬೇಯಿಸಿಕೊಳ್ಳಲು ಬೇರೆಯವರು ಗುಂಪು ಸೇರಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಪರೋಕ್ಷವಾಗಿ ಇರಾನಿ ಕಿಡಿಕಾರಿದರು.

ಇದನ್ನೂ ಓದಿ: ಬಿಎಸ್​​​ವೈ ಭೇಟಿ ಮಾಡಿದ ಬಿ ಎಲ್ ಸಂತೋಷ್: ಶೆಟ್ಟರ್​​​ಗೆ ಸಿದ್ದವಾಯ್ತಾ ಖೆಡ್ಡಾ..?

ದಲಿತ, ಆದಿವಾಸಿ ಸಮಾಜದವರೊಬ್ಬರು ರಾಷ್ಟ್ರಪತಿ ಆಗುತ್ತಾರೆ. ಅವರಿಗೆ ಅವಮಾನ ಮಾಡುವ ಕೆಲಸ ಕಾಂಗ್ರೆಸ್ ನಾಯಕರಿಂದ ಆಗುತ್ತದೆ. ಕಾಂಗ್ರೆಸ್​ನವರು ಕೋವಿಡ್ ಲಸಿಕೆಯಲ್ಲೂ ರಾಜಕಾರಣ ಮಾಡಿದರು. ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳಿದ ಕಾಂಗ್ರೆಸ್​ನವರೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ‌. ದೇಶಾದ್ಯಂತ ಮೋದಿ ಕೋವಿಡ್ ಲಸಿಕೆ ಉಚಿತ ನೀಡಿದ್ದಾರೆ‌‌. ಈಗ ಅದೇ ಇಂಜೆಕ್ಷನ್ ಕಾಂಗ್ರೆಸ್​ಗೆ ಹಾಕಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವರು ಮನವಿ ಮಾಡಿದರು.

ಇದನ್ನೂ ಓದಿ: ರಂಗೇರಿದ ಚುನಾವಣಾ ಕಣ: ಬಿಜೆಪಿಯ ಮಹಾ ಅಭಿಯಾನ.. ಅಮಿತ್​ ಶಾ ಸೇರಿ 98 ಪ್ರಭಾವಿ ನಾಯಕರಿಂದ ಮತಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.