ETV Bharat / state

ರಾಮ ಮಂದಿರ ಉದ್ಘಾಟನೆ ವೇಳೆ ಕರ ಸೇವಕರನ್ನು ಅರೆಸ್ಟ್ ಮಾಡುವ ಅಗತ್ಯ ಏನಿತ್ತು? ಜೋಶಿ ವಾಗ್ದಾಳಿ - Pralhad Joshi Slams

ಕರ ಸೇವಕರ ಬಂಧನ ಹಾಗೂ ರಾಜ್ಯ ಕಾಂಗ್ರೆಸ್​ ಸರ್ಕಾರದ ನಡೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By ETV Bharat Karnataka Team

Published : Jan 2, 2024, 6:14 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕರ ಸೇವಕರ ಬಂಧನ ಮಾಡಿರುವುದು ಸರ್ಕಾರದ ಕುಹಕ ಮತ್ತು ನೀಚತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವಾದರೆ ನಿಮಗೇಕೆ ಇಷ್ಟು ಹೊಟ್ಟೆ ಕಿಚ್ಚು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನಿಸಿದರು.

ಇದೊಂದು ಕೋರ್ಟ್ ವಾರಂಟ್ ಅಂತಾ ಸುಳ್ಳು ಹೇಳ್ತಾರೆ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೀತಾರೆ, ‌ಕೆಜಿ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯೋದನ್ನು ಮಾಡ್ತಾರೆ, ಸಿಎಂ ಸಿದ್ದರಾಮಯ್ಯ ಇದನ್ನು ಐಎಸ್‌ಐಎಸ್ ಸರ್ಕಾರ ಅಂತಾ ತಿಳಿದುಕೊಂಡಿದ್ದಾರಾ? ಎಂದು ಜೋಶಿ ಕಿಡಿಕಾರಿದರು.

ಸಿದ್ದರಾಮಯ್ಯ ಅನಗತ್ಯವಾಗಿ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದ್ದಾರೆ. ಇದನ್ನೇ ಮುಂದುವರಿಸ್ತೀವಿ ಅನ್ನೋ ದಾರ್ಷ್ಟ್ಯ ತೋರಿಸ್ತಿದ್ದಾರೆ. ತೋರಿಸಲಿ, ನಾವು ಹಿಂದೂ ಕಾರ್ಯಕರ್ತರ ಪರ ವಾದ ಮಾಡಲು ವಕೀಲರನ್ನು ಇಟ್ಟಿದ್ದೇವೆ. ಹುಬ್ಬಳ್ಳಿಯ ಈ ಕೇಸ್ ನಮ್ಮ ಗಮನಕ್ಕೆ ಬಂದಿರಲಿಲ್ಲ, ಬಂದಿದ್ರೆ ಆಗಲೇ ಹಿಂಪಡೆಯುತ್ತಿದ್ದೆವು. ಇದರ ವಿರುದ್ಧ ನಾಳೆ ಬಿಜೆಪಿಯಿಂದ ಹೋರಾಟ ಮಾಡುತ್ತಿದ್ದೇವೆ. ರಾಮ ಮಂದಿರ ಉದ್ಘಾಟನೆ ಆಗುತ್ತಿರುವಾಗ ಕರ ಸೇವಕರನ್ನು ಅರೆಸ್ಟ್ ಮಾಡುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ ಅವರು, ಪೊಲೀಸ್ ಅಧಿಕಾರಿಗಳು ಸನ್‌ಫ್ಲವರ್ ಇದ್ದ ಹಾಗೆ. ಸರ್ಕಾರ ಅನ್ನೋ ಸೂರ್ಯ ಎತ್ತ ಕಡೆ ತಿರಗ್ತಾನೆ, ಅತ್ತ ಕಡೆ ತಿರುಗ್ತಾರೆ ಎಂದು ಅಧಿಕಾರಿಗಳನ್ನು ಸಹ ಸಚಿವ ತರಾಟೆಗೆ ತಗೆದುಕೊಂಡರು.

ಬಿಜೆಪಿ ಮೇಲೆ ಆರೋಪ ಮಾಡುವ ಸಚಿವ ಎಂ ಬಿ ಪಾಟೀಲ್, ತಮ್ಮ ಪಕ್ಷದ ಪರಿಸ್ಥಿತಿಯನ್ನು ನೋಡಿಕೊಳ್ಳಲಿ. ಕಾಂಗ್ರೆಸ್ ರಾಮನ ಬಗ್ಗೆ ಅವಹೇಳನ ಮಾಡದಿದ್ದರೆ ಈ ಸ್ಥಿತಿ ಬರ್ತಿರಲಿಲ್ಲ. ಸಿದ್ದರಾಮಯ್ಯ ರಾಮನ ಭಕ್ತರಾಗಿದ್ದರೆ, ಅಯೋಧ್ಯೆಗೆ ಹೋಗಲಿ‌ ಎಂದು ಮಾಜಿ ಸಚಿವ ಆಂಜನೇಯ ಹೇಳಿಕೆ ಬಗ್ಗೆಯೂ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದರು.

ರಾಮಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯಗೆ ಆಹ್ವಾನ ನೀಡಿಲ್ಲ ಎಂಬ ಮಾಜಿ ಸಚಿವ ಆಂಜನೇಯ ಆರೋಪಕ್ಕೆ ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರಿದಂತೆ ಯಾವುದೇ ರಾಜ್ಯದ ಯಾವ ಮುಖ್ಯಮಂತ್ರಿಯನ್ನು ಸಹ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ. ನಾನು ಭಾರತ ಸರ್ಕಾರದ ಮಂತ್ರಿಯಾಗಿದ್ದು ನನ್ನನ್ನು ಸಹ ಕರೆದಿಲ್ಲ. ನನಗೆ ಕರೆಯೋದಲ್ಲ, ಬರಬೇಡಿ ಅಂತಲೂ ಹೇಳಿದ್ದಾರೆ. ಜಾಗ ಮತ್ತು ಅಲ್ಲಿನ ವ್ಯವಸ್ಥೆ ಸೀಮಿತವಾಗಿದ್ದರಿಂದ ಯಾರನ್ನು ಕರೆಯಬೇಕು, ಕರೆಯಬಾರದು ಅನ್ನೋದು ಶ್ರೀರಾಮ ಮಂದಿರ ಕಮೀಟಿಯ ಸ್ವತಂತ್ರ ನಿರ್ಧಾರವಾಗಿರುತ್ತದೆ ಎಂದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೇಂದ್ರ ಸಚಿವರು, ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದಲ್ಲಿ ಪಾಳ್ಗೊಳ್ಳುವುದಕ್ಕಿಂತ ಮುನ್ನ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸೈನಿಕ ಶಾಲೆ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಕರ ಸೇವಕರ ಬಂಧನ: ದ್ವೇಷ ರಾಜಕಾರಣ ಮಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.