ETV Bharat / state

ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯ ಅರಿವಾಗಿದೆ: ಜೋಶಿ - ಕೋವ್ಯಾಕ್ಸಿನ್ ಬಗ್ಗೆ ವಿರೋಧ

ಎರಡು ಕೆಜಿ ಪಡಿತರ ಅಕ್ಕಿ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಕೇಂದ್ರದಿಂದ ಒಟ್ಟು ಕೊಡುತ್ತಿರುವುದು 5 ಕೆಜಿ ಅಕ್ಕಿ. ಇತ್ತೀಚೆಗೆ ಸಚಿವ ಉಮೇಶ ಕತ್ತಿ ನನ್ನ ಹತ್ತಿರ ಬಂದಿದ್ದರು, ಅಧಿವೇಶನ ನಡೆದಾಗ ಭೇಟಿಯಾಗಿದ್ದರು. ಸ್ಥಳೀಯವಾಗಿ ಜೋಳ, ರಾಗಿ ಕೊಡಲು ಅನುಮತಿ ಕೇಳಿದ್ದರು‌ ಎಂದು ಸ್ಪಷ್ಟಪಡಿಸಿದರು.

union-minister-prahlada-joshi-talk-about-corona-issue
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಚಿವ ಶೆಟ್ಟರ್
author img

By

Published : Apr 30, 2021, 9:37 PM IST

ಧಾರವಾಡ: ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯ ಅರಿವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಪಕ್ಷ ನಾಯಕರಿಗೆ ತಿವಿದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಚಿವ ಶೆಟ್ಟರ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲೇ ಕೋವಿಡ್ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ದರು. ಅಡೆ ತಡೆ ಹಾಕಿ ಭಯ ಹುಟ್ಟಿಸದಿದ್ದರೆ ಲಸಿಕೆ ಇನ್ನೂ ಜಾಸ್ತಿ ಆಗುತ್ತಿತ್ತು. ಕೋವ್ಯಾಕ್ಸಿನ್ ಬಗ್ಗೆ ಯಾರು ಯಾರೋ ಏನೇನೋ ಮಾತನಾಡಿದರು ತುಂಬಾ ಕೆಟ್ಟದಾಗಿಯೂ ಮಾತನಾಡಿದ್ದರು ಎಂದರು.

ಆದರೆ ಈಗ ಕೋವ್ಯಾಕ್ಸಿನ್ ಸೇಫ್ ಅಂತಾ ಆಗಿದ್ದು, ಅತಿ ಕೆಟ್ಟದಾದ ಪ್ರತಿಕ್ರಿಯೆಗಳನ್ನು ನಾವು ಎದುರಿಸಬೇಕಾಯಿತು. ಆಗ ನಿರೀಕ್ಷಿತ ಬೆಂಬಲ ಸಿಕ್ಕಿದ್ದರೆ ಲಸಿಕಾಕರಣ ಎಲ್ಲ ಮುಗಿತಿತ್ತು. ಆರೋಪ‌ ಮಾಡಿದವರಿಗೆ ಈಗ ಸತ್ಯ ಸಂಗತಿ ಅರಿವಾಗಿದೆ.‌ ಕೋವಿಶಿಲ್ಡ್ ಮಾತ್ರ ವಿದೇಶದಿಂದ ಬರಬೇಕು ಅದು ಸಹ ಬರುತ್ತೇ, ಕೋವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ ಎಂದರು.

ಎರಡು ಕೆಜಿ ಪಡಿತರ ಅಕ್ಕಿ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಕೇಂದ್ರದಿಂದ ಒಟ್ಟು ಕೊಡುತ್ತಿರುವುದು 5 ಕೆಜಿ ಅಕ್ಕಿ. ಇತ್ತೀಚೆಗೆ ಸಚಿವ ಉಮೇಶ ಕತ್ತಿ ನನ್ನ ಹತ್ತಿರ ಬಂದಿದ್ದರು, ಅಧಿವೇಶನ ನಡೆದಾಗ ಭೇಟಿಯಾಗಿದ್ದರು. ಸ್ಥಳೀಯವಾಗಿ ಜೋಳ, ರಾಗಿ ಕೊಡಲು ಅನುಮತಿ ಕೇಳಿದ್ದರು‌ ಎಂದು ಸ್ಪಷ್ಟಪಡಿಸಿದರು. ಅಕ್ಕಿಗೆ ಭಾರತ ಸರ್ಕಾರ ಹಣ ಕೊಡುತ್ತೆ, ಹೀಗಾಗಿ 5 ಕೆಜಿಯಲ್ಲಿ ಇನ್ನು 3 ಕೆಜಿ ಜೋಳ ಅಥವಾ ರಾಗಿ ಕೊಡುತ್ತಾರೆ ಎಂದರು.

ಖಾಸಗಿ ಆಸ್ಪತ್ರೆ ಮುಖ್ಯಸ್ಥರರೊಂದಿಗೆ ಸಭೆ ಮಾಡಿದ್ದೇವೆ: ಶೆಟ್ಟರ್

ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಡನೆ ಸಭೆ ಬಳಿಕ ಮಾತನಾಡಿದ ಶೆಟ್ಟರ್, ಈ ಮುಂಚೆಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ಆಸ್ಪತ್ರೆಯವರ ಸಮಸ್ಯೆ ಬಗ್ಗೆಯೂ ಇದೀಗ ಚರ್ಚೆ ಮಾಡಿದ್ದೇವೆ ಆಸ್ಪತ್ರೆಯವರು ಸರ್ಕಾರದ ನಿರ್ಧಾರಕ್ಕೆ ಸಿದ್ಧರಿದ್ದೇವೆ ಅಂದಿದ್ದಾರೆ, ಸಹಕಾರ ಕೊಡೋದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಆರಂಭಿಸಲಾಗಿದೆ 08047168111 ನಂಬರ್ ಗೆ ಫೋನ್ ಮಾಡಬಹುದು ಎಂದರು.

ವಾರ್ ರೂಮ್ ನಿಂದ ಆಸ್ಪತ್ರೆ, ಬೆಡ್ ಬಗ್ಗೆ ವ್ಯವಸ್ಥೆ ಮಾಡಲಾಗುತ್ತೆ ಬಳಿಕ ಆಸ್ಪತ್ರೆ ಹೆಸರು, ಬೆಡ್ ಸಂಖ್ಯೆಯನ್ನು ರೋಗಿಗೆ ತಿಳಿಸಲಾಗುತ್ತೆ ಖಾಸಗಿಯವರು ಆರಂಭದಲ್ಲಿ ಬೆಡ್ ಕೊಡಲು ನಿರಾಕರಿಸಿದ್ದರು. ಅವರಿಗೆ ನೋಟಿಸ್ ಕೊಟ್ಟಿದ್ದೆವು ಕಾನೂನು ಸಂಘರ್ಷಕ್ಕೆ ಅವಕಾಶ ಕೊಡೋದು ಬೇಡ, ಹೀಗಾಗಿ ಸಹಕಾರ ಕೊಡಿ ಅಂತಾ ಹೇಳಿದ್ದೇವೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಕೋವಿಡ್ ಅಲ್ಲದ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಕೊಡಲಾಗುವುದು‌ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.