ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಸಿಸಿ ಸರ್ಕಾರ ಇದ್ದಂತೆ. ಸಿಸಿ ಎಂದರೆ ಕರಪ್ಷನ್‌ಗೆ ಕಾಂಪಿಟೇಶನ್ (ಭ್ರಷ್ಟಾಚಾರ) ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಪರಸ್ಪರ ಕೆಸರೆರಚಾಟ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಬೇಕು. ಅವರೇ ಈ ಬಗ್ಗೆ ಮಾತನಾಡಿದ್ದಾರೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಸರ್ಕಾರ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಆದರೆ ಪಕ್ಷದಲ್ಲಿ ಕಚ್ಚಾಟ ನಿಲ್ಲುತ್ತಿಲ್ಲ. ಗುಂಪುಗಾರಿಕೆಯಿಂದ ಆಡಳಿತದ ಮೇಲೆ ಪರಿಣಾಮ ಉಂಟಾಗುತ್ತಿದೆ. ಸಿಸಿ ರಸ್ತೆಯಂತೆ ಇದು ಕರಪ್ಷನ್ ಕಾಂಪಿಟೇಶನ್ ಸರ್ಕಾರ. ಇದೇ ಸರ್ಕಾರದ ಸಾಧನೆ. ಪ್ರಧಾನಿ ಮೋದಿ ಸರ್ಕಾರ ಐದು ಕೆ.ಜಿ ಅಕ್ಕಿ ಕೊಟ್ಟರೆ ಇದಕ್ಕೆ ರಾಜ್ಯದಲ್ಲಿ ಇವರು ಒಂದು ಕೆ.ಜಿ ಹೆಚ್ಚು ಅಕ್ಕಿಯನ್ನೂ ಸೇರಿಸಿ ಕೊಟ್ಟಿಲ್ಲ. ಇದನ್ನೇ ಅನ್ನಭಾಗ್ಯ ಯೋಜನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಈಡಿಗ ಸಮಾವೇಶ ನಡೆಸುತ್ತಿರುವುದ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಸಮಾವೇಶದ ವಿರುದ್ಧ ಹರಿಪ್ರಸಾದ್ ಮಾತನಾಡಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ತಮ್ಮ ವಿರುದ್ಧ ಮಸಲತ್ತು ಮಾಡುವವರ ಬಗ್ಗೆ ಮಾತನಾಡುವ ತಾಕತ್ತು ಹರಿಪ್ರಸಾದ್ ಅವರಿಗಿಲ್ಲ. ಹೀಗಾಗಿ ಅವರು ಬಿಜೆಪಿಗೆ ಬೈಯ್ಯುತ್ತಿದ್ದಾರೆ. ಈ ಮಸಲತ್ತು ಮಾಡುತ್ತಿರುವುದು ಸಿದ್ಧರಾಮಯ್ಯ. ಆದರೆ ಅದರ ವಿರುದ್ಧ ಮಾತನಾಡುವ ಶಕ್ತಿ ಹರಿಪ್ರಸಾದ್ ಅವರಿಗಿಲ್ಲ. ಅವರು ಸರ್ಕಾರದ ವಿರುದ್ಧ ಎಷ್ಟು ಪುಟಿಯುತ್ತಾರೋ ಅದರ ಮೇಲೆ ಉತ್ತರ ನೀಡುತ್ತೇನೆ ಎಂದರು.
ಇದನ್ನೂ ಓದಿ: ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ ಸುಳ್ಳು; ಎಲ್ಲರೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ: ಪ್ರಹ್ಲಾದ್ ಜೋಶಿ