ಧಾರವಾಡ: ಮೋದಿ ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿಗೆ ತಂದಿದ್ದಾರೆ. ಸರ್ಕಾರ ಕಡಿಮೆ, ಆಡಳಿತ ಹೆಚ್ಚು ಅನ್ನೋ ಪರಿಕಲ್ಪನೆ ಮನ್ ಕಿ ಬಾತ್ ಅದರದ್ದೊಂದು ಪ್ರಯತ್ನ, ಜನರ ಹಾಗೂ ಪಿಎಂ ನಡುವೆ ಸಂವಹನ ಆಡಳಿತವನ್ನು ಸರಾಗವಾಗಿ ನಡೆಸೋ ವಿಧಾನವದು ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದರು.
ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಸಮಸ್ಯೆಯನ್ನು ನೇರವಾಗಿ ಪಿಎಂಗೆ ಹೇಳಬಹುದು. ಅವುಗಳನ್ನು ಪಿಎಂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಒಳ್ಳೆಯ ವಿಚಾರವನ್ನು ಮೋದಿ ಪ್ರಶಂಸಿಸುತ್ತಾರೆ. ವಿಶೇಷವೆನಿಸಿದರೆ ಅಂಥವರನ್ನು ಸಂಪರ್ಕಿಸುತ್ತಾರೆ ಎಂದರು.
ಇದು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಸ್ವಾತಂತ್ರ್ಯಾ ನಂತರ ಈ ಕೆಲಸ ಈಗ ನಡೆಯುತ್ತಿದೆ. ಮೋದಿ ಸಾಮಾನ್ಯ ನಾಗರಿರಕನ್ನು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರದ ಕವಿವಿ ಆವರಣದ ಕುಲಪತಿಗಳ ನಿವಾಸದಲ್ಲಿ ಸಚಿವ ವಿ.ಮುರಳೀಧರನ್ ಶಿಕ್ಷಣ ತಜ್ಞರೊಂದಿಗೆ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸಿದರು.