ETV Bharat / state

ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ..!

''ನಾವು ಪಿಎಫ್ಐ ನಿಷೇಧಿಸಿ ಕರ್ನಾಟಕದ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ. ಆದರೆ ಮತ ಬ್ಯಾಂಕಿಗಾಗಿ ಕಾಂಗ್ರೆಸ್ ಪಿಎಫ್ಐಯನ್ನು ಸಮರ್ಥಿಸುತ್ತಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

Union Home Minister Amit Shah
ಕೇಂದ್ರ ಗೃಹ ಸಚಿವ ಅಮಿತ್​ ಶಾ
author img

By

Published : Apr 28, 2023, 7:23 PM IST

ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾತನಾಡಿದರು.

ಹುಬ್ಬಳ್ಳಿ: ''ಮಲ್ಲಿಕಾರ್ಜುನ ಖರ್ಗೆ ಅವರೇ ನೀವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏನೇ ಮಾತನಾಡಿದರೂ ಜನರ ವೋಟುಗಳು ಬಿಜೆಪಿ ಪಕ್ಷಕ್ಕೆ ಬರುತ್ತೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಗರಂ ಆದರು.

ಕಾಂಗ್ರೆಸ್​ಗೆ ಜನರು ಬುದ್ಧಿ ಕಲಿಸಲಿದ್ದಾರೆ- ಶಾ: ನಗರದ ಅಣ್ಣಿಗೇರಿ‌ ಪಟ್ಟಣದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು, ''ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದೇಶದ ಕೋಟ್ಯಂತರ ಜನರ ಸಾಲದಿಂದ ಮುಕ್ತಗೊಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಬಗ್ಗೆ ಮಾತನಾಡುವುದಕ್ಕೆ ಜನರಿಗೆ ತುಂಬಾ ನೋವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ಗೆ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖರ್ಗೆ ಹೇಳಿಕೆಯಿಂದ ಬಿಜೆಪಿಗೆ ಹೆಚ್ಚಿನ ಮತಗಳನ್ನು ಬರುತ್ತೆ: ''ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯಿಂದ ನಿಮಗೆ ಯಾವುದೇ ರೀತಿ ಲಾಭವಾಗುವುದಿಲ್ಲ. ಅವರು ನೀಡಿರುವ ಹೇಳಿಕೆಗಳಿಂದ ಬಿಜೆಪಿಗೆ ಅತೀ ಹೆಚ್ಚಿನ ಮತಗಳನ್ನು ಬರಲು ಕಾರಣವಾಗುತ್ತವೆ. ಕಾಂಗ್ರೆಸ್​ ನಾಯಕರು ನರೇಂದ್ರ ಮೋದಿ ಅವರನ್ನು ಹೆಚ್ಚು ಟೀಕೆ ಮಾಡಿದಷ್ಟು ಬಿಜೆಪಿಗೆ ವೋಟುಗಳು ಬರುತ್ತವೆ. ಜೊತೆಗೆ ನರೇಂದ್ರ ಮೋದಿಯವರ ಕೈ ಬಲಪಡಿಸಿದಂತೆ ಆಗುತ್ತದೆ'' ಎಂದರು.

ಇದನ್ನೂ ಓದಿ: ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿತ್ತು : ಜಗದೀಶ್ ಶೆಟ್ಟರ್

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ''ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ರೆ ನಾನು ಹೆದರುವುದಿಲ್ಲ, ಪಿಎಫ್​ಐ ನಿಷೇಧಿಸಿ ಕರ್ನಾಟಕ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ. ಆದ್ರೆ ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಪಿಎಫ್ಐಯನ್ನು ಸಮರ್ಥಿಸುತ್ತಿದೆ'' ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ''ಕಾಶ್ಮೀರ ದೇಶದ ಅವಿಭಾಜ್ಯ ಅಂಗ. ಕಾಶ್ಮೀರದಲ್ಲಿ ವ್ಯಾಪಕವಾಗಿ 370 ಅನ್ವಯ ಕೊಟ್ಟ ವಿಶೇಷ ಸ್ಥಾನಮಾನ‌ ವಾಪಸ್ ಪಡೆದಿದೆ. ಅದ್ರೆ ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳು ವಿರೋಧಿಸಿದವು. ಕೇಂದ್ರ ಸರ್ಕಾರ ಯಾವುದಕ್ಕೂ ಜಗ್ಗಲಿಲ್ಲ. ಈಗ ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ'' ಎಂದರು.

ಇದನ್ನೂ ಓದಿ: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ಮತ ಬೇಟೆ

ಈಗ ರಾಜ್ಯದಲ್ಲಿ ಕಮಲ ಅರಳಬೇಕು- ಅಮಿತ್ ಶಾ: ''ಕರ್ನಾಟಕದಲ್ಲಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು. ಅದನ್ನು‌ ಬಿಜೆಪಿ ವಾಪಸ್ ಪಡೆದಿದೆ. ಆದ್ರೆ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡೋದಾಗಿ ಹೇಳ್ತಿದೆ. ಯಾರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡ್ತೀರಿ ಎಂದು ಕಾಂಗ್ರೆಸ್ ನಾಯಕರಿಗೆ ಅಮಿತ್ ಶಾ ಪ್ರಶ್ನಿಸಿದರು. ''ಡಬಲ್ ಎಂಜಿನ್ ಸರ್ಕಾರ ತನ್ನಿ ಮೋದಿ ಅವರ ಕೈ ಮತ್ತಷ್ಟು ಬಲಪಡಿಸಿ. ಮುಂದಿನ ಮೋದಿ ಸರ್ಕಾರ ಬರಬೇಕು ಎಂದರೆ, ಈಗ ರಾಜ್ಯದಲ್ಲಿ ಕಮಲ ಅರಳಬೇಕು'' ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಅಭ್ಯರ್ಥಿಗಳ ಪರ ಅಖಾಡಕ್ಕಿಳಿದ ಕುಟುಂಬಸ್ಥರು: ಸೋಮಣ್ಣ ಪರ ಪತ್ನಿ ಭರ್ಜರಿ ಪ್ರಚಾರ..

ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ, ಯಾರೂ ನಿಲ್ಲಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.