ETV Bharat / state

ಕವಿವಿಯೊಳಗೆ 'ಉಗಾಂಡಾ'ದ ವಿದ್ಯಾರ್ಥಿ ಪಿಹೆಚ್‌ಡಿ ತಪಸ್ಸು.. ಒಬ್ಬಂಟಿ ಜತೆಗೆ ಆಧ್ಯಾತ್ಮಿಕ ಬೆಳಗು!! - Uganda student living alone in Karnataka VV

ವಸತಿ ನಿಲಯದಲ್ಲಿನ ಎಲ್ಲಾ ವಿದ್ಯಾರ್ಥಿಗಳು ಅವರವರ ಜಿಲ್ಲೆಗೆ ತೆರಳಿದ್ದಾರೆ. ಕಳೆದ 3 ತಿಂಗಳಿನಿಂದ ಇವರು ಹಾಸ್ಟೆಲ್​​‌ನಲ್ಲಿ ಬಸವಣ್ಣ, ರಾಮಾನುಜಾಚಾರ್ಯ ಅವರ ವಿಚಾರಧಾರೆ ಅಧ್ಯಯನ ಮಾಡುತ್ತಾ, ಒಂಟಿಯಾಗಿ ವಸತಿ ನಿಲಯದಲ್ಲಿ ವಾಸವಿದ್ದಾರೆ..

Uganda student living alone in Karnataka VV
ಕರ್ನಾಟಕ ವಿ.ವಿ.ಯಲ್ಲಿ 'ಉಗಾಂಡಾ'ದ ವಿದ್ಯಾರ್ಥಿಯ ಒಬ್ಬಂಟಿ ವಾಸ
author img

By

Published : Jun 27, 2020, 7:05 PM IST

Updated : Jun 27, 2020, 7:33 PM IST

ಧಾರವಾಡ : ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್​​ಡೌನ್​​ ಮಾಡಲಾಗಿತ್ತು. ಆದರೆ, ಹಂತ ಹಂತವಾಗಿ ಲಾಕ್​​ಡೌನ್ ಸಡಿಲಿಕೆ ಮಾಡಲಾಗಿದೆ. ಲಾಕ್​​ಡೌನ್ ಸಮಯದಲ್ಲಿ ಜನ ಮನೆಯಲ್ಲಿ ಕುಳಿತುಕೊಳ್ಳಲು ಬೇಸರ ಮಾಡಿಕೊಳ್ಳುತ್ತಿದ್ದರು. ಈಗ ಜನ ಕೊರೊನಾ ಭಯವಿಲ್ಲದೇ ಓಡಾಡಿಕೊಂಡಿದ್ದಾರೆ. ಆದರೆ, ಹೊರ ದೇಶದ ಪ್ರಜೆಯೊಬ್ಬ ಹೊರಗೆ ಬರದೇ ತಮ್ಮಷ್ಟಕ್ಕೆ ತಾವೇ ಲಾಕ್​​ಡೌನ್ ಮಾಡಿಕೊಂಡಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಉಗಾಂಡಾ ದೇಶದ ಜಿಯೋಲ್ ಎಂಬ ವಿದ್ಯಾರ್ಥಿಯು ಪಿಹೆಚ್​​​​​​​​​ಡಿ ಮಾಡುತ್ತಿದ್ದಾರೆ. ಇವರು ಪ್ರೊ. ಜಾಲಿಹಾಳ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಲಾಕ್​​ಡೌನ್ ನಂತರ ಇವರಿಗೆ ಕವಿವಿ ಹಾಗೂ ಪ್ರೊ. ಜಾಲಿಹಾಳ ಅವರಿಂದ ದಿನಸಿ‌ ನೀಡಲಾಗಿದೆ. ಸ್ವತಃ ತಾವೇ ಅಡುಗೆ ಮಾಡಿ ಕವಿವಿ ಭೀಮಾ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ.

ಕರ್ನಾಟಕ ವಿ.ವಿ.ಯಲ್ಲಿ 'ಉಗಾಂಡಾ'ದ ವಿದ್ಯಾರ್ಥಿಯ ಒಬ್ಬಂಟಿ ವಾಸ

ವಸತಿ ನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಅವರವರ ಜಿಲ್ಲೆಗೆ ತೆರಳಿದ್ದಾರೆ. ಕಳೆದ ಮೂರು ತಿಂಗಳಿನಿಂದ ಇವರು ಹಾಸ್ಟೆಲ್​​‌ನಲ್ಲಿ ಬಸವಣ್ಣ, ರಾಮಾನುಜಾಚಾರ್ಯ ಅವರ ವಿಚಾರಧಾರೆಗಳನ್ನು ಅಧ್ಯಯನ ಮಾಡುತ್ತಾ, ಒಬ್ಬಂಟಿಯಾಗಿ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ. ಇನ್ನೂ ಜಿಯೋಲ್ ಹಾಸ್ಟೆಲ್ ಗೇಟ್ ಹಾಕಿಕೊಂಡು ಹೊರಗೆ ಬರದೇ ಒಬ್ಬಂಟಿಯಾಗಿ ವಸತಿ ನಿಲಯದಲ್ಲಿ ಕಾಲ ಕಳೆಯುತ್ತಿದ್ದಾರೆ.

Last Updated : Jun 27, 2020, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.