ETV Bharat / state

ಹೈಪ್ರೊಫೈಲ್ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಪ್ರವೇಶ... ಸಿಸಿಟಿವಿಯಲ್ಲಿ ಸೆರೆ ಆಯ್ತು ಖದೀಮರ ಕೈಚಳಕ! - ಹೈ ಪ್ರೊಫೈಲ್ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿ

ಹೈಪ್ರೊಫೈಲ್ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದ್ದ ಖದೀಮರು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಆರೋಪ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಇವರ ಕೈಚಳಕ ಸಿಸಿಟಿಯಲ್ಲಿ ಸೆರೆಯಾಗಿದೆ.

two-watch-stolen-by-gang-in-hubli
ಹೈಪ್ರೊಫೈಲ್ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಪ್ರವೇಶ... ಸಿಸಿಟಿವಿಯಲ್ಲಿ ಸೆರೆ ಆಯ್ತು ಖದೀಮರ ಕೈಚಳಕ!
author img

By

Published : Jan 9, 2020, 1:44 PM IST

Updated : Jan 9, 2020, 1:51 PM IST

ಹುಬ್ಬಳ್ಳಿ: ಶ್ರೀಮಂತ ಗ್ರಾಹಕರಂತೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿಯರು ಇದ್ದ ತಂಡ ದುಬಾರಿ ಬೆಲೆಯ 2 ವಾಚ್​ಗಳನ್ನು ಕದ್ದು ಪರಾರಿಯಾಗಿರುವ ಆರೋಪ ಪ್ರಕರಣ ನಗರದ ಗೋಕುಲ ರಸ್ತೆ ಅರ್ಬನ್ ಓಯಸಿಸ್ ಮಾಲ್​ನ ವಾಚ್ ಅಂಗಡಿಯಲ್ಲಿ ನಡೆದಿದೆ.

ವೇಮರೆಡ್ಡಿ ಪಾಟೀಲ್​ ಮಾಲೀಕತ್ವದ ಹಾರಿಜಾನ್ ವಾಚ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7,995 ರೂ. ಬೆಲೆಯ ಟೈಮೆಕ್ಸ್ ಸ್ಮಾರ್ಟ್ ವಾಚ್ ​ಅನ್ನು ಖದೀಮರು ಎಗರಿಸಿದ್ದಾರೆ ಎನ್ನಲಾಗ್ತಿದೆ.

ಹೈ ಪ್ರೊಫೈಲ್ ಗ್ರಾಹಕರ ಸೋಗಿನಲ್ಲಿಅಂಗಡಿಗೆ ಬಂದೋರು..ಕೊನೆಗೆ ಮಾಡಿದ್ದೇನು ಗೊತ್ತಾ?

ಕಳ್ಳರ ಕೈಚಳಕ: ಬುಧವಾರ ರಾತ್ರಿ 7. 30ರ ಸುಮಾರು ಮೊದಲು ಮಹಿಳೆ ಅಂಗಡಿ ಒಳಗೆ ಬಂದು ಗಮನಿಸಿ ವಾಪಸಾಗಿದ್ದಳು. ಕೆಲ ಕ್ಷಣಗಳ ನಂತರ ಸೂಟು ಬೂಟು ಧರಿಸಿ, ಕೈಯಲ್ಲಿ ಲ್ಯಾಪ್​ಟಾಪ್ ಬ್ಯಾಗ್ ಹಿಡಿದಿದ್ದ ಇಬ್ಬರು ಯುವಕರು ಹಾಗೂ ಯುವತಿ ಅಂಗಡಿ ಪ್ರವೇಶಿಸಿದ್ದರು. ನಂತರ ಕೆಂಪು ಟೀಶರ್ಟ್ ಧರಿಸಿದ್ದ ಯುವಕ ‘ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ’ ಎಂದು ಸಿಬ್ಬಂದಿಗೆ ಹೇಳಿದ್ದನಂತೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, ‘ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ?’ ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ. ಮತ್ತೋರ್ವ ಟೈಮೆಕ್ಸ್ ಕೌಂಟರ್​ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ ಎನ್ನಲಾಗ್ತಿದೆ. ಅದಾದ ನಂತರ ಸುಮ್ಮನೆ ಅದೂ ಇದೂ ವಿಚಾರಿಸಿ ವಾಪಸಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ಪ್ಯಾಕ್ ಚೆಕ್ ಮಾಡಿದಾಗ ವಾಚ್ ಕಳ್ಳತವಾಗಿದ್ದು ಬೆಳಕಿಗೆ ಬಂದಿದೆ. ತಕ್ಷಣ ಏರ್​ಪೋರ್ಟ್ ಹಾಗೂ ವಸತಿ ಗೃಹಗಳಲ್ಲಿ ವಿಚಾರಣೆ ನಡೆಸಿದರೂ ಪ್ರಯೋಜನವಾಗಿಲ್ಲವಂತೆ. ಈ ಕುರಿತು ಗೋಕುಲ್​ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ:

ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್​ನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಗ್ಯಾಂಗ್ ಮಾಲ್​ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆಯಲ್ಲಿ ಓಡಾಡಿರುವ ದೃಶ್ಯಗಳೂ ಸೆರೆಯಾಗಿವೆ.

Intro:ಹುಬ್ಬಳ್ಳಿ-04

ಹೈ ಪ್ರೊಫೈಲ್ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುವ ಕಳ್ಳರ ಗ್ಯಾಂಗ್ ಈಗ ಹುಬ್ಬಳ್ಳಿಯ
ನಗರದಲ್ಲಿ ಸಕ್ರಿಯವಾಗಿದೆ.
ಶ್ರೀಮಂತ ಗ್ರಾಹಕರಂತೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಇದ್ದ ತಂಡ ದುಬಾರಿ ಬೆಲೆಯ 2 ವಾಚ್​ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಇಲ್ಲಿನ ಗೋಕುಲ ರಸ್ತೆ ಅರ್ಬನ್ ಓಯಸಿಸ್ ಮಾಲ್​ನ ವಾಚ್ ಅಂಗಡಿಯಲ್ಲಿ ನಡೆದಿದೆ.
ವೇಮರೆಡ್ಡಿ ಪಾಟೀಲ ಮಾಲೀಕತ್ವದ ಹಾರಿಜಾನ್ ವಾಚ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7,995 ರೂ. ಬೆಲೆಯ ಟೈಮೆಕ್ಸ್ ಸ್ಮಾರ್ಟ್ ವಾಚ್​ಅನ್ನು ಎಗರಿಸಿದ್ದಾರೆ.

ಕಳ್ಳರ ಕೈಚಳಕ: ರಾತ್ರಿ 7.30ರ ಸುಮಾರು ಮೊದಲು ಮಹಿಳೆ ಅಂಗಡಿ ಒಳಗೆ ಬಂದು ಗಮನಿಸಿ ವಾಪಸಾಗಿದ್ದಾಳೆ. ಕೆಲ ಕ್ಷಣಗಳ ನಂತರ ಸೂಟು ಬೂಟು ಧರಿಸಿ, ಕೈಯಲ್ಲಿ ಲ್ಯಾಪ್​ಟಾಪ್ ಬ್ಯಾಗ್ ಹಿಡಿದಿದ್ದ ಇಬ್ಬರು ಯುವಕರು ಹಾಗೂ ಯುವತಿ ಅಂಗಡಿ ಪ್ರವೇಶಿಸಿದ್ದಾರೆ. ನಂತರ ಕೆಂಪು ಟೀಶರ್ಟ್ ಧರಿಸಿದ್ದ ಯುವಕ ‘ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ’ ಎಂದು ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, ‘ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ ?’ ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ. ಮತ್ತೊಬ್ಬ ಟೈಮೆಕ್ಸ್ ಕೌಂಟರ್​ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ. ಅದಾದ ನಂತರ ಸುಮ್ಮನೆ ಅದೂ ಇದೂ ವಿಚಾರಿಸಿ ವಾಪಸಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ಪ್ಯಾಕ್ ಚೆಕ್ ಮಾಡಿದಾಗ ವಾಚ್ ಕಳ್ಳತವಾಗಿದ್ದು ಬೆಳಕಿಗೆ ಬಂದಿದೆ. ತಕ್ಷಣ ಏರ್​ಪೋರ್ಟ್ ಹಾಗೂ ವಸತಿ ಗೃಹಗಳಲ್ಲಿ ವಿಚಾರಣೆ ನಡೆಸಿದರೂ ಪ್ರಯೋಜನವಾಗಿಲ್ಲ.
ಈ ಕುರಿತು ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

*ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ*
ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್​ನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಗ್ಯಾಂಗ್ ಮಾಲ್​ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆ ಯಲ್ಲಿ ಓಡಾಡಿ ತೆರಳಿದೆ. ಆ ದೃಶ್ಯಗಳೂ ಸೆರೆಯಾಗಿವೆ.
ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ, ಬೆಳ್ಳಿ, ಮೊಬೈಲ್​ಫೋನ್ ಕದ್ದು ಪರಾರಿಯಾಗಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಬಿಜಿನೆಸ್​ವುನ್​ಗಳ ವೇಷದಲ್ಲಿ ಮಾಲ್​ಗೆ ಬಂದು ಕಳ್ಳತನ ಮಾಡಿರುವುದು ಅಂಗಡಿಗಳ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಇದರಿಂದಾಗಿ ಪ್ರಾಮಾಣಿಕ ಗ್ರಾಹಕರನ್ನೂ ಅನುಮಾನದಿಂದ ನೋಡುವಂತಾಗಿದೆ.

Note-
tcr20seconda_40 seconds between Body:H B GaddadConclusion:Etv hubli
Last Updated : Jan 9, 2020, 1:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.