ETV Bharat / state

ಟ್ರ್ಯಾಕ್ಟರ್-ಟಂಟಂ ಡಿಕ್ಕಿ: ಇಬ್ಬರು ಸಾವು, ಐವರು ಗಂಭೀರ

author img

By

Published : Dec 1, 2020, 1:26 PM IST

ಹುಬ್ಬಳ್ಳಿಯ ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಟಂ ಟಂ ಆಟೋ ಮತ್ತು ಟ್ರ್ಯಾಕ್ಟರ್​ ನಡುವಿನ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

two died after auto and tractor collides
ಇಬ್ಬರು ಸಾವು

ಹುಬ್ಬಳ್ಳಿ : ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ -4 ರ ವರೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

two died after auto and tractor collides
ಘಟನಾ ಸ್ಥಳದ ಚಿತ್ರಣ
ಹುಬ್ಬಳ್ಳಿಯ ಆಟೋ ಹಾಗೂ ಗುಡ್ಡದಹುಲಿಕಟ್ಟಿ ಗ್ರಾಮದ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಆಟೋದಲ್ಲಿ ಹಳೇ ಹುಬ್ಬಳ್ಳಿಯ ಸಾಧಿಕ್, ಸಲೀಂ ಹಾಗೂ ಬೆಳಗಲಿ ಮೂಲದ ಶೇಕರಪ್ಪ ಹುಲಗೇರಿ ಸೇರಿದಂತೆ ಒಟ್ಟು 7 ಜನ ಪ್ರಯಾಣಿಸುತ್ತಿದ್ದರು.‌ ಹುಬ್ಬಳ್ಳಿಯಿಂದ ಗುಡ್ಡದ ಹುಲಿಕಟ್ಟಿಗೆ ಕೂಲಿ ಕೆಲಸಕ್ಕೆ ಆಟೋದಲ್ಲಿ ಹೊರಟಿದ್ದ ಕಾರ್ಮಿಕರ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ‌ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.