ETV Bharat / state

ಧಾರವಾಡದ ಇಬ್ಬರಿಗೆ ಸನ್ಮಾನ ಮಾಡಲಿದ್ದಾರೆ ಮೋದಿ: ಅಷ್ಟಕ್ಕೂ ಇವರ ಸಾಧನೆ ಏನು? - ಸ್ವಚ್ಛ ಭಾರತ ದಿವಸ

ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ಪರಿಸರ ಕಾಳಜಿ ತೋರಿಸುತ್ತಿರುವ ಧಾರವಾಡ ಜಿಲ್ಲೆಯ ಇಬ್ಬರು ವ್ಯಕ್ತಿಗಳಿಗೆ ಪ್ರಧಾನಿ ಮೋದಿ ಸನ್ಮಾನ ಮಾಡಲಿದ್ದಾರೆ.

ಧಾರವಾಡದ ಇಬ್ಬರು ವ್ಯಕ್ತಿಗಳಿಗೆ ಸನ್ಮಾನ ಮಾಡಲಿದ್ದಾರೆ ಮೋದಿ
author img

By

Published : Sep 26, 2019, 7:47 PM IST

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಬಿಡ್ನಾಳ ಹಾಗೂ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಗುತ್ತಿಗೆ ಪೌರ ಕಾರ್ಮಿಕ ಕರಿಬಸಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ಲಭಿಸಿದೆ.

ಧಾರವಾಡದ ಇಬ್ಬರು ವ್ಯಕ್ತಿಗಳಿಗೆ ಸನ್ಮಾನ ಮಾಡಲಿದ್ದಾರೆ ಮೋದಿ

ಗುಜರಾತ್‌ನ ಸಬರಮತಿಯಲ್ಲಿ ಅಕ್ಟೋಬರ್ 2 ರಂದು ನಡೆಯಲಿರುವ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ, ಸ್ವಚ್ಛ ಭಾರತ ದಿವಸ ಕಾರ್ಯಕ್ರಮದಲ್ಲಿ ಈ ಇಬ್ಬರು ಭಾಗವಹಿಸಲಿದ್ದಾರೆ. ಅಂಚಟಗೇರಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂದು ಬಸವರಾಜ್ ಬಿಡ್ನಾಳ ಸಾಕಷ್ಟು ಶ್ರಮ ವಹಿಸಿದ್ದಾರೆ. ಇವರ ಪ್ಲಾಸ್ಟಿಕ್ ಮುಕ್ತ ಗ್ರಾಮ ಕುರಿತು ಈ ಟಿವಿ ಭಾರತ ಕೂಡಾ ವಿಸ್ತೃತ ವರದಿ ಮಾಡಿತ್ತು.

ಇವರು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಪಣ ತೊಟ್ಟು ಅದಕ್ಕೆ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅಂಚಟಗೇರಿ ಗ್ರಾಮದಲ್ಲಿನ ಶಾಲಾ ಮಕ್ಕಳನ್ನೇ ಬಳಸಿಕೊಂಡಿದ್ದಾರೆ. ಮಕ್ಕಳು ತಮ್ಮ ತಮ್ಮ ಮನೆ ಹಾಗೂ ಗ್ರಾಮದಲ್ಲಿನ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿಗಳನ್ನು ತಂದರೆ ಅವರಿಗೆ 2 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದ್ದರು. ಇದರಿಂದಾಗಿ ಸಣ್ಣದಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮದತ್ತ ಅಂಚಟಗೇರಿ ಹೆಜ್ಜೆ ಇಟ್ಟಂತಾಗಿದೆ.

ಇನ್ನು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಗುತ್ತಿಗೆ ಪೌರ ಕಾರ್ಮಿಕ ಕರಿಬಸಪ್ಪ ಗುಡಿಸಲಮನಿ ಅವರು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಗ್ರಾಮದಲ್ಲಿ ಯಾರಾದರು ಬಯಲು ಶೌಚಾಲಯಕ್ಕೆ ಹೋಗುತ್ತಿದ್ದರೆ ಅವರನ್ನು ತಡೆದು ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಮನವರಿಕೆ ಮಾಡುತ್ತಿದ್ದರು. ಹಾಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿ ಶೌಚಾಲಯ ನಿರ್ಮಾಣ ಮಾಡಿಸಿಕೊಡುತ್ತಿದ್ದರು.

ಸದ್ಯ ಗ್ರಾಮದಲ್ಲಿ ಶೇಕಡ 90 ರಷ್ಟು ಶೌಚಾಲಯಗಳು ನಿರ್ಮಾಣವಾಗಿವೆ. ಹೀಗಾಗಿ ಈವರೂ ಸಹ ಪ್ರಧಾನಿ ನರೇಂದ್ರ ಮೋದಿಯಿಂದ ಬುಲಾವ್ ಬಂದಿದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ತಮಗೆ ಗೊತ್ತಿಲ್ಲದೆ ಸಮಾಜ ಸೇವೆ ಹಾಗೂ ಪರಿಸರ ರಕ್ಷಣೆ ಮಾಡಿದ ಹಳ್ಳಿ ಹೈದರಿಗೆ ಪ್ರಧಾನಿ ಮೋದಿಯಿಂದ ಸನ್ಮಾನ ಮಾಡಿಸಿಕೊಳ್ಳುವ ಭಾಗ್ಯ ಲಭ್ಯಸಿದೆ. ಇವರ ಸಮಾಜ ಸೇವೆಯ ಕುರಿತು ಈಟಿವಿ ಭಾರತ ಸಹ ಸುದ್ದಿಯನ್ನು ಮಾಡಿದ್ದು. ಅವರ ಪರಿಸರ ಕಾಳಜಿಯ ಕುರಿತು ಬೆಳೆಕು ಚಲ್ಲಿತ್ತು. ಧಾರವಾಡ ಜಿಲ್ಲೆಯಿಂದ ಇಬ್ಬರು ವ್ಯಕ್ತಿಗಳು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗ್ಯ ದೊರೆತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

Intro:ಹುಬ್ಬಳ್ಳಿ-03

ಪ್ರತಿಫಲವನ್ನು ಬಯಸದೇ ಕೆಲಸ ಮಾಡಿದ್ರೆ, ಒಂದಲ್ಲಾ ಒಂದು ದಿನ ಅದಕ್ಕೆ ಫಲ ಸಿಗಲಿದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಹೌದು ಗ್ರಾಮೀಣ ಪ್ರದೇಶದಲ್ಲಿ ವಾಸಮಾಡುತ್ತಾ ತಮ್ಮ ಕೈಲಾದ ಸಮಾಜ ಸೇವೆ ಮಾಡುವರು ಇವರು. ಅಂತವರನ್ನು ದೇಶದ ಪ್ರಧಾನಿ ಗುರುತಿಸಿ ಅವರಿಗೆ ಸನ್ಮಾನ ಮಾಡಲಿದ್ದಾರೆ. ಅಷ್ಟಕ್ಕೂ ಅವರು ಮಾಡುತ್ತಿದ್ದ ಕೆಲಸ ಏನು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..

Gfx in

* ಪ್ರಧಾನಿ ನರೇಂದ್ರ ಮೋದಿಯವರಿಂದ ಧಾರವಾಡ ಜಿಲ್ಲೆಯ ಇಬ್ಬರಿಗೆ ಬುಲಾವ್.

* ಮಹಾತ್ಮ ಗಾಂಧಿ ಜಯಂತಿಯಂದು ಪ್ರಧಾನಿ ಮೋದಿಯಿಂದ ಸನ್ಮಾನ

Gfx out

Voice over...
ಅಂದಹಾಗೇ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ ಬಿಡ್ನಾಳ ಹಾಗೂ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಗುತ್ತಿಗೆ ಪೌರ ಕಾರ್ಮಿಕ ಕರಿಬಸಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ಲಭಿಸಿದೆ.  ಗುಜರಾತ್‌ನ ಸಬರಮತಿಯಲ್ಲಿ ಅಕ್ಟೋಬರ್ 2 ರಂದು ನಡೆಯಲಿರುವ ಮಹಾತ್ಮಗಾಂಧಿ ಜಯಂತಿ ಅಂಗವಾಗಿ, ಸ್ವಚ್ಛ ಭಾರತ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂಚಟಗೇರಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಅಂತಾ ಬಸವರಾಜ್ ಬಿಡ್ನಾಳ ಸಾಕಷ್ಟು ಶ್ರಮ ವಹಿಸಿದ್ದಾರೆ. ಇವರ ಪ್ಲಾಸ್ಟಿಕ್ ಮುಕ್ತ ಗ್ರಾಮ ಕುರಿತು ಈ ಟಿವಿ ಭಾರತ ಕೂಡಾ ವಿಸ್ತ್ರತ ವರದಿಯನ್ನು ಮಾಡಿತ್ತು. ಇವರು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಪಣ ತೊಟ್ಟು ಅದಕ್ಕೆ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅಂಚಟಗೇರಿ ಗ್ರಾಮದಲ್ಲಿನ ಶಾಲಾ ಮಕ್ಕಳನ್ನೇ ಬಳಸಿಕೊಂಡಿದ್ದಾರೆ . ಮಕ್ಕಳು ತಮ್ಮ ತಮ್ಮ ಮನೆ ಹಾಗೂ ಗ್ರಾಮದಲ್ಲಿನ  ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿಗಳನ್ನು ತಂದರೆ ಅವರಿಗೆ 2 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದ್ದರು. ಇದರಿಂದಾಗಿ ಸಣ್ಣದಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮದತ್ತ ಅಂಚಟಗೇರಿ ಹೆಜ್ಜೆ ಇಟ್ಟಂತಾಗಿದೆ. ನಮ್ಮನು ಗುರುತಿಸಿದಕ್ಕೆ ಧನ್ಯವಾದಗಳನ್ನು ತಿಳಿಸುತ್ತಾರೆ.

ಬೈಟ್- ಬಸವರಾಜ ಬಿಡ್ನಾಳ, ಅಂಚಟಗೇರಿ ಗ್ರಾಪಂ ಅಧ್ಯಕ್ಷ

Voice over
ಇನ್ನೂ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಗುತ್ತಿಗೆ ಪೌರ ಕಾರ್ಮಿಕ ಕರಿಬಸಪ್ಪ ಗುಡಿಸಲಮನಿ ಅವರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಗ್ರಾಮದಲ್ಲಿ ಬಯಲು ಶೌಚಾಲಯಕ್ಕೆ ಹೋಗುತ್ತಿದ್ದರೆ ಅವರನ್ನು ತಡೆದು ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಮನವರಿಕೆ ಮಾಡುತ್ತಿದ್ದರು . ಹಾಗೇ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿ ಶೌಚಾಲಯ ನಿರ್ಮಾಣ ಮಾಡಿಸಿಕೊಡುತ್ತಿದ್ದರು. ಸದ್ಯ ಗ್ರಾಮದಲ್ಲಿ ಶೇಕಡಾ 90 ಶೌಚಾಲಯಗಳನ್ನು ನಿರ್ಮಾಣವಾಗಿವೆ.  ಹಾಗಾಗಿ ಈವರಿಗೂ ಸಹ ಪ್ರಧಾನಿ ನರೇಂದ್ರ ಮೋದಿಯಿಂದ ಬುಲಾವ್ ಬಂದಿದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

 ಬೈಟ- ಕರಿಬಸಪ್ಪ, ಪೌರಕಾರ್ಮಿಕ

Voice over
ತಮಗೆ ಗೊತ್ತಿಲ್ಲದೆ ಸಮಾಜ ಸೇವೆ ಹಾಗೂ ಪರಿಸರ ರಕ್ಷಣೆ ಮಾಡಿದ ಹಳ್ಳಿ ಹೈದರಿಗೆ ಈವಾಗ ಪ್ರಧಾನಿ ಮೋದಿಯಿಂದ ಸನ್ಮಾನ ಮಾಡಿಸಿಕೊಳ್ಳುವ ಭಾಗ್ಯ ಲಭ್ಯಸಿದೆ. ಇವರ ಸಮಾಜ ಸೇವೆಯ ಕುರಿತು ಈಟಿವಿ ಭಾರತ ಸಹ ಸುದ್ದಿಯನ್ನು ಮಾಡಿದ್ದು, ಅವರ ಪರಿಸರ ಕಾಳಜಿಯ ಕುರಿತು ಬೆಳೆಕು ಚಲ್ಲಿದ್ದು, ಧಾರವಾಡ ಜಿಲ್ಲೆಯಿಂದ ಇಬ್ಬರು ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗವಹಿಸುವಂತಹ ಭಾಗ್ಯ ದೊರೆತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

_________________
H B Gaddad
Etv BHARAT hubballiBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.