ಧಾರವಾಡ : ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ ಇದೀಗ ಭಾರೀ ಟ್ವಿಸ್ಟ್ ಪಡೆದುಕೊಂಡಿದೆ. ಅಳಿಯನೇ ಉದ್ಯಮಿಯ ಕಿಡ್ನಾಪ್ ಪ್ಲ್ಯಾನ್ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಅಳಿಯ ಪವನ್ ವಾಜಪೇಯಿ, ಅಪಹರಣದ ಪ್ರಮುಖ ಸೂತ್ರಧಾರ. ಪವನ್ ಸೇರಿದಂತೆ ಐವರನ್ನ ಪೊಲೀಸರು ಬಂಧಿಸಿದಾರೆ. ನಿನ್ನೆ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಅಪಹರಣವಾಗಿತ್ತು. ನಾಯ್ಡು ಜೊತೆಗೆ ಅಳಿಯ ಪವನ್ ಕೂಡ ಸೈಟ್ ನೋಡಲು ಹೋಗಿದ್ದ. ಈ ವೇಳೆ ಅಪರಿಚಿತರು ದಾಳಿ ಮಾಡಿ ಅಪಹರಣ ಮಾಡಿದ್ದರು.
ಬಳಿಕ ಪವನ್ ಮನೆಗೆ ಬಂದು ಮಾವನ ಕಿಡ್ನಾಪ್ ಸ್ಟೋರಿ ಹೆಣೆದಿದ್ದ ಎನ್ನಲಾಗಿದೆ. ಆರಂಭದಿಂದಲೇ ಅಳಿಯನ ಮೇಲೆ ಪೊಲೀಸರ ಸಂಶಯ ವ್ಯಕ್ತವಾಗಿತ್ತು. ಪೊಲೀಸ್ ತನಿಖೆಯಲ್ಲಿ ಅಳಿಯ ಪವನ್ ಅಪಹರಣದ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ. ಪವನ್‌ಗೆ ಕಿಡ್ನಾಪ್ ಮಾಡಲು ನಾಲ್ವರು ಸಾಥ್ ನೀಡಿದವರು ಸಹ ಪೊಲೀಸರ ಅತಿಥಿಯಾಗಿದ್ದಾರೆ.
ಅಳಿಯ ಪವನ್ ಸೇರಿ ಆಸೀಫ್, ಸಮೀರ್, ಮಂಜುನಾಥ, ಖಲೀಲ್ ಎಂಬುವರು ಶ್ರೀನಿವಾಸ್ ನಾಯ್ಡು ಅವರನ್ನು ಕಿಡ್ನಾಪ್ ಮಾಡಿದ್ದರು. ಇದೀಗ ಐವರನ್ನೂ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ: ಬೆನ್ನಟ್ಟಿದ ಪೊಲೀಸರಿಗೆ ಹೆದರಿ ಬಿಟ್ಟು ಹೋದರು