ಹುಬ್ಬಳ್ಳಿ : ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತೈಲ ಖರೀದಿ ನಿಲ್ಲಿಸುವ ಮೂಲಕ ಮೇ 31ರಂದು ಪ್ರತಿಭಟನೆ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.
ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್ಗಳ ಮುಂದೆ ವಾಹನ ಸವಾರರು ಬೀಡುಬಿಟ್ಟಿದ್ದಾರೆ. ಕೃಷಿ ಚಟುವಟಿಕೆಗಳನ್ನು ಬದಿಗಿಟ್ಟು ಅನ್ನದಾತ ಇಂಧನಕ್ಕಾಗಿ ಸಾಲಿನಲ್ಲಿ ನಿಂತಿದ್ದಾನೆ.
ಬೆಲೆ ಏರಿಳಿತದಿಂದ ಡೀಲರ್ಗಳಿಗೆ ರಕ್ಷಣೆ ಒದಗಿಸಬೇಕು. ಬೇಡಿಕೆಯಷ್ಟು ತೈಲ ಪೂರೈಸಬೇಕು ಮತ್ತು ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮೇ 31ರಂದು ಪ್ರತಿಭಟನೆ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧಾರ ಮಾಡಿದ್ದಾರೆ.
ಬಿಪಿಸಿಎಲ್ ಮತ್ತು ಹೆಚ್‌ಪಿಸಿಎಲ್ ಕಂಪನಿಗಳ ನಿರ್ವಹಣೆಯಲ್ಲಿ ಆಗುತ್ತಿರುವ ವೈಫಲ್ಯದಿಂದಾಗಿ ಪೆಟ್ರೋಲ್ ಬಂಕ್ ಮಾಲೀಕರು ತೊಂದರೆಗೆ ಸಿಲುಕುವಂತಾಗಿದೆ ಎಂದು ಡೀಲರ್ಗಳು ಹೇಳಿದ್ದಾರೆ. ಈಗಾಗಲೇ ಧಾರವಾಡ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಮುಂಗಾರು ಚುರುಕುಗೊಂಡಿದೆ. ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ಅಳ್ನಾವರ ಮುಂತಾದ ಕಡೆಗಳಲ್ಲಿ ಭೂಮಿಯನ್ನು ಹದ ಮಾಡಲಾಗುತ್ತಿದೆ.
ಇನ್ನು ಬಿತ್ತನೆ ಕಾರ್ಯ ಸಹ ಮಾಡಲಾಗುತ್ತಿದೆ. ಇದರ ಮಧ್ಯೆ ಬೆಳಗ್ಗೆಯಿಂದ ಸಂಜೆಯವರೆಗೆ ಪೆಟ್ರೋಲ್ ಬಂಕ್ ಮುಂದೆ ನೂರಾರು ಟ್ರ್ಯಾಕ್ಟರ್, ಲಾರಿ ಇತರ ವಾಹನಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್, ಯುಧ್ವೀರ್ ಮೇಲೆ ಮಸಿ ಎರಚಿದ ಕೋಡಿಹಳ್ಳಿ ಬೆಂಬಲಿಗರು