ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಯುವಕನೋರ್ವ ಹುಚ್ಚಾಟ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತಿದ್ದ ಈ ಯುವಕ, ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವುದು, ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು ಹೀಗೆ ಸುಮಾರು ಹೊತ್ತು ಆಟವಾಡಿದ್ದಾನೆ.
ರೈಲು ವೇಗವಾಗಿ ಚಲಿಸುತ್ತಿರುತ್ತದೆ, ಮಾರ್ಗದ ಮಧ್ಯೆ ಸಾಕಷ್ಟು ಪ್ರಪಾತಗಳು ಇರುತ್ತವೆ. ಅಪ್ಪಿತಪ್ಪಿ ಏನಾದ್ರೂ ಕಾಲು ಜಾರಿ ಬಿದ್ದರೆ ಜೀವವೇ ಹೋಗುತ್ತೆ. ಇದೆಲ್ಲಾ ಗೊತ್ತಿದ್ದರೂ ಯುವಕನ ಹುಚ್ಚಾಟ ಮಾತ್ರ ಜೋರಾಗಿತ್ತು. ಸದ್ಯ ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಓದಿ: ಬೆಂಗಳೂರು : ಅನ್ಯ ಧರ್ಮಿಯರಿಗೆ ಕಾರ್ಯಕ್ರಮ ನಡೆಸಲು ಅನುಮತಿಗೆ ಒತ್ತಾಯಿಸಿ ಪ್ರತಿಭಟನೆ