ETV Bharat / state

ಸಾರಿಗೆ ಸಂಸ್ಥೆಯಿಂದ ಕೋವಿಡ್ ಕಾರ್ಯಗಳಿಗೆ ಸಾರಿಗೆ ಟ್ರಕ್ ನಿಯೋಜನೆ - Dharwad news

ಟ್ರಕ್‌ಗಳಿಗೆ 10 ಚಾಲಕರನ್ನು ಸಹ ಸರತಿಯ ಮೇಲೆ ಕಾರ್ಯ ನಿರ್ವಹಿಸಲು ನಿಯೋಜನೆ ಮಾಡಲಾಗಿದೆ. ಇದರೊಂದಿಗೆ 47 ಲೀಟರ್ ಸಾಮರ್ಥ್ಯದ 5 ಸಿಲಿಂಡರ್‌ಗಳನ್ನು ಸಹ ಪಾಲಿಕೆ ನೀಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯ ತಿಳಿಸಿದ್ದಾರೆ.

Transport Truck started for covid related works by Transport Organization
ಸಾರಿಗೆ ಸಂಸ್ಥೆಯಿಂದ ಕೋವಿಡ್ ಕಾರ್ಯಗಳಿಗಾಗಿ ಸಾರಿಗೆ ಟ್ರಕ್ ನಿಯೋಜನೆ
author img

By

Published : May 13, 2021, 10:54 PM IST

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಗಾರದಿಂದ ಕೋವಿಡ್ ಕಾರ್ಯಗಳ ನೆರವಿಗೆ 5 ಸಾರಿಗೆ ಟ್ರಕ್‌ಗಳನ್ನು ನಿಯೋಜಿಸಲಾಗಿದೆ. ಈ ಸಾರಿಗೆ ಟ್ರಕ್‌ಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡಲಾಗಿದ್ದು, ಆಕ್ಸಿಜನ್, ವೈದ್ಯಕೀಯ ಉಪಕರಣ ಸರಬರಾಜು ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಾಗುತ್ತಿದೆ.

ಟ್ರಕ್‌ಗಳಿಗೆ 10 ಚಾಲಕರನ್ನು ಸಹ ಸರತಿಯ ಮೇಲೆ ಕಾರ್ಯ ನಿರ್ವಹಿಸಲು ನಿಯೋಜಿಸಲಾಗಿದೆ. ಇದರೊಂದಿಗೆ 47 ಲೀಟರ್ ಸಾಮರ್ಥ್ಯದ 5 ಸಿಲಿಂಡರ್‌ಗಳನ್ನು ಸಹ ಪಾಲಿಕೆ ನೀಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯ ತಿಳಿಸಿದ್ದಾರೆ.

ಟ್ರಕ್‌ಗಳನ್ನು ನೀಡಿರುವುದಿಂದ ಕೋವಿಡ್ ಕಾರ್ಯಗಳನ್ನು ಕೈಗೊಳ್ಳಲು ಪಾಲಿಕೆಗೆ ಅನುಕೂಲವಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ಹಸಿವು: ಧಾರವಾಡದಲ್ಲಿ ಯುವಕರಿಂದ ಫುಡ್ ಕಿಟ್ ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.