ಧಾರವಾಡ: ಅಕ್ರಮವಾಗಿ 66 ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಇಲ್ಲಿನ ಗರಗ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧಾರವಾಡ ತಾಲೂಕಿನ ತೇಗೂರ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ವಲಸಿಗರು ಪತ್ತೆಯಾಗಿದ್ದಾರೆ. ಮಹಿಳೆಯರು, ಮಕ್ಕಳು ಲಾರಿಯಲ್ಲಿ ಇದ್ದರು. ಚಿತ್ರದುರ್ಗದ ಹಿರಿಯೂರಿನಿಂದ ಮಹಾರಾಷ್ಟ್ರದ ರಾಯಗಢಕ್ಕೆ ಚಿತ್ರದುರ್ಗದ ಹಿರಿಯೂರಿನಿಂದ ಲಾರಿ ಹೊರಟಿತ್ತು.
ಸರಕು ಸಾಗಣೆಯ ಪಾಸ್ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕಾರ್ಮಿಕರನ್ನು ನಗರದ ಸರ್ಕಾರಿ ಆಶ್ರಯ ತಾಣಕ್ಕೆ ಕಳಿಸಲಾಗಿದೆ.