ಧಾರವಾಡ : ಕೇಂದ್ರ ಸರ್ಕಾರದ ವಿರುದ್ಧ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ಗೆ ಧಾರವಾಡದಲ್ಲಿ ಸಹ ಬೆಂಬಲ ವ್ಯಕ್ತವಾಗುತ್ತಿದೆ. ಹಲವು ಸಂಘಟನೆಗಳು ಸೇರಿ ಬಂದ್ಗೆ ಬೆಂಬಲ ಸೂಚಿಸಿವೆ.
ಬೆಳಗ್ಗೆಯಿಂದ 6 ರಿಂದ ಸಂಜೆ 6ಗಂಟೆವರೆಗೆ ಬಂದ್ ಮಾಡಲು ಸಂಘಟನೆಗಳು ತೀರ್ಮಾನಿಸಿವೆ. ಕನ್ನಡಪರ, ರೈತಪರ, ದಲಿತ, ವ್ಯಾಪಾರಸ್ಥರ ಸಂಘ ಸೇರಿ ಒಟ್ಟು 9 ಸಂಘಟನೆಗಳು ಸಭೆ ಸೇರಿ ಧಾರವಾಡದಲ್ಲಿ ಬಂದ್ಗೆ ಬೆಂಬಲ ಸೂಚಿಸಿವೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ನೂತನ ಎಪಿಎಂಸಿ ಕಾಯ್ದೆ ವಿರುದ್ಧ ರೈತರು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಅದಕ್ಕೆ ಧಾರವಾಡದಲ್ಲಿ ಸಹ ಬೆಂಬಲ ವ್ಯಕ್ತವಾಗಿದೆ.