ಧಾರವಾಡ: ಧಾರವಾಡದಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಎರಡೂವರೆ ವರ್ಷದ ಮಗುವಿಗೂ ಸೋಂಕು ದೃಢಪಟ್ಟಿದೆ. ಮಗು ಸೇರಿದಂತೆ ಇಬ್ಬರು ಬಾಲಕರಿಗೆ ಸೋಂಕು ಆವರಿಸಿದೆ. ಪಿ-1942ರ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ.
33 ವರ್ಷದ ಮಹಿಳೆ ಪಿ-2156 ವರ್ಷದ ಬಾಲಕ ಪಿ-2157ಎರಡೂವರೆ ವರ್ಷದ ಗಂಡು ಮಗು ಪಿ-2158 ಮಹಾರಾಷ್ಟ್ರದಿಂದ ಆಗಮಿಸಿದ್ದ ಕುಟುಂಬ ಸದಸ್ಯರ ಸಂಪರ್ಕ ಹಿನ್ನೆಲೆ ಸೋಂಕು ದೃಢಪಟ್ಟಿದೆ.
ಮೇ 20ರಂದು ಕುಟುಂಬದ ಸದಸ್ಯರು ಧಾರವಾಡಕ್ಕೆ ಬಂದಿದ್ದರು. ಈ ಕುಟುಂಬದ ನಾಲ್ವರಿಗೂ ಸೋಂಕು ದೃಢಪಟ್ಟಿತ್ತು. ಆ ನಾಲ್ಕು ಮಂದಿಯ ಸೋಂಕಿತರ ಸಂಪರ್ಕದಿಂದ ಇಂದು ಮೂವರಲ್ಲಿ ಕೊರೊನಾ ಕಾಣಿಸಿಕೊಂಡಿದೆ.