ETV Bharat / state

ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಟೈರ್ ಸ್ಫೋಟ; ಅನಾಹುತ ತಪ್ಪಿಸಿದ ಪೈಲೆಟ್

ನಿನ್ನೆ ಸಂಜೆ ಕಣ್ಣೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇಂಡಿಗೋ 6E 7979 ವಿಮಾನದ ಟೈರ್ ಬ್ಲ್ಯಾಸ್ಟ್​​​ ಆಗಿದೆ. ಆದರೆ ಪೈಲೆಟ್ ಸಮಯ ಪ್ರಜ್ಞೆಯಿಂದ ಬಹು ದೊಡ್ಡ ಅನಾಹುತ ತಪ್ಪಿದೆ.

author img

By

Published : Jun 15, 2021, 12:12 PM IST

Tire blast of airoplane while landing in hubli
ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಟೈರ್ ಸ್ಫೋಟ

ಹುಬ್ಬಳ್ಳಿ: ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಸ್ಫೋಟವಾಗಿದ್ದು, ಕ್ಷಣಮಾತ್ರದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ. ನಿನ್ನೆ ಸಂಜೆ ಕಣ್ಣೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಟೈರ್ ಬ್ಲಾಸ್ಟ್ ಆಗಿತ್ತು.

ಕಣ್ಣೂರಿನಿಂದ ಬೆಂಗಳೂರಿಗೆ ಹೊರಟಿದ್ದ ಈ ವಿಮಾನವು ಹುಬ್ಬಳ್ಳಿಯಿಂದ 18 ಪ್ರಯಾಣಿಕರನ್ನು ಕರೆದುಕೊಂಡು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸುಮಾರು 200 ಮೀಟರ್ ಮುಂದೆ ಬಂದು ಲ್ಯಾಂಡ್ ಆಗಿದ್ದು ನೋಸ್ ಟೈರ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಈ ಘಟನೆಯಿಂದ ಗಾಬರಿಯಾಗದಂತೆ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನವನ್ನು ಮತ್ತೆ ಟೇಕ್ ಆಫ್​​ ಮಾಡಿದ ಪೈಲೆಟ್, ಸಾವಕಾಶವಾಗಿ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು. ಆದರೆ, ನೋಸ್ ಟೈರ್ ಸ್ಫೋಟಗೊಂಡಿದ್ದರಿಂದ ಮುಂದಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಸೋಂಕಿತರ ಸಂಖ್ಯೆ ಇಳಿಮುಖ: ಗವಿಮಠದ ಕೋವಿಡ್ ಕೇರ್​ ಸೆಂಟರ್​​​ ಸ್ಥಗಿತ

ಇದರಿಂದ ಹುಬ್ಬಳ್ಳಿಯಿಂದ ಹೋಗುತ್ತಿದ್ದ 18 ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿ, ಮರಳಿ ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡಿಸಿಜಿ ತಂಡ ತನಿಖೆ ಮಾಡುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.