ETV Bharat / state

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ: ಕೊನೆಗೆ ಭಾವಚಿತ್ರ ಸ್ಥಳಾಂತರ

ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ಬಳಿಕ ಟಿಪ್ಪು ಭಾವಚಿತ್ರವನ್ನು ಪೊಲೀಸರು ಸ್ಥಳಾಂತರ ಮಾಡಿದರು.

Tipu Jayanti celebration at Idga Maidan
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ
author img

By

Published : Nov 10, 2022, 1:41 PM IST

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದರು. ಟಿಪ್ಪು ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಮಾಡಿ ಖುರಾನ್ ವಾಕ್ಯಗಳನ್ನು ಪಠಿಸಲಾಯಿತು. ಟಿಪ್ಪು ಪರ ಜಯಘೋಷ ಕೂಗಲಾಯಿತು.

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ

ಜಯಂತಿ ಮುಗಿಯುತ್ತಿದ್ದಂತೆ ಟಿಪ್ಪು ಪ್ಲೆಕ್ಸ್ ಸ್ಥಳಾಂತರ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮುಗಿದ ತಕ್ಷಣವೇ ಟಿಪ್ಪು ಭಾವಚಿತ್ರವನ್ನು ಪೊಲೀಸರು ಸ್ಥಳಾಂತರ ಮಾಡಿದರು. ಮಹಾನಗರ ಪಾಲಿಕೆ ಹಾಕಿದ್ದ ಷರತ್ತಿನಂತೆ 12 ಗಂಟೆಯವರೆಗೂ ಮಾತ್ರ ಪಾಲಿಕೆ ಅನುಮತಿ ನೀಡಿತ್ತು. ಸಮಯ ಮುಗಿದ ತಕ್ಷಣವೇ ಪೊಲೀಸರು ಭಾವಚಿತ್ರದ ಜೊತೆಗೆ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಗೇಟ್​ಗೆ ಬೀಗ ಹಾಕಿದರು.

ಇದನ್ನೂ ಓದಿ: ಟಿಪ್ಪು ಜಯಂತಿಗೆ ಶ್ರೀರಾ‌ಮ ಸೇನೆ ವಿರೋಧ: ಚೆನ್ನಮ್ಮ ವೃತ್ತದಲ್ಲಿ ಹೈಡ್ರಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.