ETV Bharat / state

ಧಾರವಾಡ: ಮೂವರಿಗೆ ಚಾಕು ಇರಿತ - ಈಟಿವಿ ಭಾರತ್ ಕನ್ನಡ ಸುದ್ದಿ

ಧಾರವಾಡ ನಗರದ ಎಲ್​ಐಸಿ ಬಳಿ ಮೂವರ ಮೇಲೆ ಚಾಕು ಇರಿದ ಘಟನೆ ನಡೆದಿದೆ.

ಧಾರವಾಡ ನಗರದ ಎಲ್​ಐಸಿ
ಧಾರವಾಡ ನಗರದ ಎಲ್​ಐಸಿ
author img

By

Published : Aug 11, 2023, 8:59 PM IST

ಧಾರವಾಡ : ಮೂವರ ಮೇಲೆ ಏಕಕಾಲದಲ್ಲಿ ಚಾಕು ಇರಿದ ಘಟನೆ ಧಾರವಾಡ ನಗರದ ಎಲ್ಐಸಿ ಕಚೇರಿ ಬಳಿ ನಡೆದಿದೆ. ಕಿರಣ, ಆಸೀಫ್ ಮತ್ತು ಶಾನವಾಜ್​ ಗಾಯಗೊಂಡಿದ್ದಾರೆ. ಮೂವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಯುವತಿ‌ ವಿಚಾರವಾಗಿ ಚಾಕು ಇರಿತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿವೃತ್ತ ಎಸ್​ಬಿಐ ಮ್ಯಾನೇಜರ್​ಗೆ ಚಾಕು ಇರಿತ : ಇನ್ನೊಂದೆಡೆ, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ನಿವೃತ್ತ ಮ್ಯಾನೇಜರ್​ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಗರದ ಡಿಸಿ ಆಫೀಸ್ ರಸ್ತೆಯಲ್ಲಿ (ಆಗಸ್ಟ್​ 10-2023) ನಡೆದಿತ್ತು. ಜಯರಾಮ್ ಕೊಲ್ಲಾಪೂರ ಅವರು ಚಾಕು ಇರಿತಕ್ಕೊಳಗಾದ ನಿವೃತ್ತ ಬ್ಯಾಂಕ್​ ಮ್ಯಾನೇಜರ್. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.

ಡಿಸಿ ಆಫೀಸ್​ಗೆ ಜಯರಾಮ್​ ತಮ್ಮ ಮಗನ ಜೊತೆಗೆ ಬಂದಿದ್ದರು. ಈ ವೇಳೆ ಎರಡು ಬೈಕ್​ಗಳಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಮೂರು ಬಾರಿ ಇರಿದಿದ್ದರು. ಸ್ಥಳಕ್ಕೆ ಜನ ಧಾವಿಸಿ ಬಂದ ಕಾರಣ ಆರೋಪಿಗಳು ಪರಾರಿಯಾಗಿದ್ದರು. ಜಯರಾಮ್​ ಅವರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್​ಗೆ ರವಾನಿಸಲಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಾಕ್ಷ್ಯಗಳನ್ನು ಕಲೆಹಾಕಿದ್ದರು. ದುಷ್ಕರ್ಮಿಗಳ ಚಲನವಲನಗಳ ಮಾಹಿತಿ ಪಡೆದ ಅಧಿಕಾರಿಗಳು ಬಂಧನಕ್ಕೆ ಬಲೆ ಬೀಸಿದ್ದರು. ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಪತಿಯಿಂದಲೇ ಪತ್ನಿ ಕೊಲೆ ಯತ್ನ : ಪತ್ನಿ ಸರಿಯಿಲ್ಲ ಎಂದು ಹಾಡಹಗಲೇ ಪತಿಯೇ ಆಕೆಗೆ ಚಾಕು ಇರಿದಿರುವ ಘಟನೆ ಜೂನ್ 21ರ ಸಂಜೆ ಬಾಣಸವಾಡಿಯ ಸೆಂಟ್ ಜೋಸೆಫ್ ಚರ್ಚ್ ಬಳಿ ನಡೆದಿತ್ತು. ನಿಖಿತಾ (30) ತನ್ನ ಗಂಡ ದಿವಾಕರ್​ನಿಂದ ಚಾಕು ಇರಿತಕ್ಕೊಳಗಾದ ಮಹಿಳೆ. ಚಾಕು ಇರಿದ ಗಂಡ ದಿವಾಕರ್ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪನ ಮಗ ಪ್ರತೀಭ್​ನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದರು.

ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ : ಸಂಬಂಧದಲ್ಲಿ ಅಂತರ ಕಾಯ್ದುಕೊಂಡ ಪ್ರಿಯಕರನಿಗೆ ಪ್ರೇಯಸಿಯೇ ಚಾಕುವಿನಿಂದ ಇರಿದಿರುವ ಘಟನೆ ಜುಲೈ ತಿಂಗಳಲ್ಲಿ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಸ್ಸಾಂ ಮೂಲದವರಾದ ಜೋಗೇಶ್ ಇರಿತಕ್ಕೊಳಗಾದ ಯುವಕ. ಆರೋಪಿ ಮಹಿಳೆ ಬರೂತಿಯನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮೊದಲೇ ಒಂದು ಮದುವೆಯಾಗಿ ಗಂಡನಿಂದ ಮಹಿಳೆ ದೂರಾಗಿದ್ದು, ಆ ಬಳಿಕ ಜೋಗೇಶ್‌ನೊಂದಿಗೆ ಒಟ್ಟಿಗೆ ವಾಸವಿದ್ದರು. ಇತ್ತೀಚಿಗೆ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಯುವಕ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Haveri crime: ಹಾವೇರಿಯಲ್ಲಿ ನಿವೃತ್ತ SBI ಮ್ಯಾನೇಜರ್​ಗೆ ಚಾಕು ಇರಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.