ETV Bharat / state

ಸೆಟರ್ಸ್‌ ಮುರಿದು ಬಟ್ಟೆ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಬಂಧನ! - thief arrested in hubli

ದಿನಾಂಕ 25/02/2021ರಂದು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಬಟ್ಟೆಯ ಅಂಗಡಿಗೆ ಹಾಕಿದ ಸೆಟರ್ಸ್‌ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ..

thief arrested in hubli
ಆರೋಪಿ ಬಂಧನ
author img

By

Published : Feb 26, 2021, 11:03 AM IST

ಹುಬ್ಬಳ್ಳಿ : ಬಟ್ಟೆ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಉಪನಗರ ಪೊಲೀಸ್​​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳು, ಇನ್ಸ್‌ಪೆಕ್ಟರ್ ರವಿಚಂದ್ರ ಡಿ. ಬಡಪಕ್ಕೀರಪ್ಪನವರ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ನೇತೃತ್ವದ ತಂಡವನ್ನು ರಚನೆ ಮಾಡಿದ್ದರು.

ದಿನಾಂಕ 25/02/2021ರಂದು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಬಟ್ಟೆಯ ಅಂಗಡಿಗೆ ಹಾಕಿದ ಸೆಟರ್ಸ್‌ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ಪೈರೋಜ್ ಜಪ್ರಿ ಬಂಧಿತ ಆರೋಪಿ. ಮೂಲತಃ ಶಿವಮೊಗ್ಗ ಮೂಲದವನಾದ ಈತನನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ 4,150 ರೂ. ಹಣ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಇದನ್ನೂ ಓದಿ:ಬಾಯ್​ಫ್ರೆಂಡ್​ನೊಂದಿಗೆ ಆಟೋದಲ್ಲಿ ಗಲಾಟೆ : ಕೆಳಗುರುಳಿದ ಯುವತಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.