ETV Bharat / state

ಹುಬ್ಬಳ್ಳಿ : ರೈಲಿನಲ್ಲಿ ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನ ದೋಚುತ್ತಿದ್ದ ಕಳ್ಳನ ಬಂಧನ

ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಜಾನ್‌ಸುಕುರ ಸ್ಟೀವನ್‌ ಎಂಬಾತ ಬಂಧಿತ ಆರೋಪಿ. ಈತ ರೈಲಿನಲ್ಲಿ ಪ್ರಯಾಣಿಕರು ಮಲಗಿದ್ದಾಗ, ಅವರಿಗೆ ಗೊತ್ತಾಗದಂತೆ ಬ್ಯಾಗ್‌ನಲ್ಲಿದ್ದ ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ..

ಕಳ್ಳನ ಬಂಧನ
ಕಳ್ಳನ ಬಂಧನ
author img

By

Published : Feb 20, 2022, 6:44 PM IST

ಹುಬ್ಬಳ್ಳಿ : ರೈಲಿನಲ್ಲಿ ಪ್ರಯಾಣಿಕರು ರಾತ್ರಿ ಹೊತ್ತು ಮಲಗಿದ್ದಾಗ ಅವರ ಬ್ಯಾಗ್‌ಗಳಿಂದ ಬೆಲೆ ಬಾಳುವ ನಗ-ನಾಣ್ಯ ಕಳುವು ಮಾಡುತ್ತಿದ್ದ ಓರ್ವನನ್ನು ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು 5.60 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಮತ್ತು ಇನ್ನಿತರೆ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಜಾನ್‌ಸುಕುರ ಸ್ಟೀವನ್‌ ಎಂಬಾತ ಬಂಧಿತ ಆರೋಪಿ. ಈತ ರೈಲಿನಲ್ಲಿ ಪ್ರಯಾಣಿಕರು ಮಲಗಿದ್ದಾಗ, ಅವರಿಗೆ ಗೊತ್ತಾಗದಂತೆ ಬ್ಯಾಗ್‌ನಲ್ಲಿದ್ದ ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ.

ರೈಲ್ವೆ ಪೊಲೀಸ್‌ ಠಾಣೆ ಎಎಸ್‌ಐ ಸತ್ಯಪ್ಪ ಮುಕ್ಕಣ್ಣವರ ಮತ್ತು ಸಿಬ್ಬಂದಿ ಜಾನ್‌ಸುಕುರನನ್ನು ಬಂಧಿಸಿ, ಆತನಿಂದ ಒಟ್ಟು ಮೂರು ಪ್ರಕರಣಗಳನ್ನು ಭೇದಿಸಿದ್ದಾರೆ.

101 ಗ್ರಾಂ ಚಿನ್ನಾಭರಣ, ಎರಡು ಮೊಬೈಲ್, ಒಂದು ಆ್ಯಪಲ್‌ ಕಂಪನಿಯ ಲ್ಯಾಪ್‌ಟಾಪ್‌, ಸ್ಮಾರ್ಟ್‌ ವಾಚ್‌ ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : 2021-22ರ ಅವಧಿಯಲ್ಲಿ ಬರೋಬ್ಬರಿ 1.78 ಕೋಟಿಗೂ ಹೆಚ್ಚು ಜನರಿಂದ ಟಿಕೆಟ್‌ ರಹಿತ ಪ್ರಯಾಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.