ಹುಬ್ಬಳ್ಳಿ: ಮೂರುಸಾವಿರ ಮಠದ ಇಂದಿನ ಬೆಳವಣಿಗೆ ಬೇಸರ ತರಿಸಿದ್ದು, ಸದ್ಯಕ್ಕೆ ಶ್ರೀಮಠಕ್ಕೆ ಉತ್ತರಾಧಿಕಾರಿಯ ಅವಶ್ಯಕತೆ ಇಲ್ಲ. ಅವಶ್ಯಕತೆ ಇದ್ರೆ ನಾನೇ ಉತ್ತರಾಧಿಕಾರಿ ಎಂದು ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.
ನಗರದ ಮೂರುಸಾವಿರಮಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರುಸಾವಿರ ಮಠಕ್ಕೆ ಈಗಿರುವ ಶ್ರೀಗಳು ಆರೋಗ್ಯದಿಂದ ಇದ್ದಾರೆ. ಆದರೂ ಸಹಿತ ಉತ್ತರಾಧಿಕಾರತ್ವಕ್ಕಾಗಿ ತೆರೆಮರೆಯಲ್ಲಿ ಹೋರಾಟ ನಡೆದಿರೋದು ಬೇಸರ ತಂದಿದೆ. ಅಲ್ಲದೇ 1998 ರಲ್ಲಿಯೇ ನನ್ನುನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಲಿಂ. ಮುಜುಗಂ ಉತ್ತರಾಧಿಕಾರಿ ಪತ್ರವನ್ನು ಕೂಡ ಮಾಡಿಸಿದ್ದರು. ಇದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಸಹ ಆಗಿದೆ. ಜೊತೆಗೆ ಉತ್ತರಾಧಿಕಾರಿ ವಿಷಯ ಸದ್ಯ ಕೋರ್ಟ್‌ನಲ್ಲಿದ್ದು, ಇಂತಹ ಬೆಳವಣಿಗೆ ಸರಿಯಲ್ಲ ಎಂದರು.
ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳಿಗೆ ಹೆಚ್ಚಿನ ಪ್ರಚಾರ ಸಿಕ್ಕಿದ್ದು, ಮುಂದಿನ 45 ದಿನಗಳಲ್ಲಿ ಪ್ರಕರಣವನ್ನು ದಿಂಗಾಲೇಶ್ವರ ಸ್ವಾಮಿಗಳು ಇತ್ಯರ್ಥ ಮಾಡಬೇಕು. ಈ ಬಗ್ಗೆ ಉನ್ನತ ಸಮಿತಿ, ಮುಜುಗ ನಿರ್ಧಾರ ಮಾಡುತ್ತಾರೆ. ಆದರೆ ಗಡುವಿನ ಬಗ್ಗೆ ಹೆಚ್ಚಿನ ವಿಚಾರ ಮಾಡಲ್ಲ. ಅಲ್ಲದೇ ದಿಂಗಾಲೇಶ್ವರ ಸ್ವಾಮಿಗಳು ನೀಡಿದ ಉತ್ತರಾಧಿಕಾರಿ ಪತ್ರ ಸಿಂಧುತ್ವ ಆಗಿಲ್ಲ. ಗುರು ಸಿದ್ದೇಶ್ವರ ಸ್ವಾಮಿಗಳು ನಿರ್ಧಾರ ತೆಗೆದುಕೊಳ್ಳಲು ಸಮರ್ಥರು. ಈ ಹಿನ್ನಲೆಯಲ್ಲಿ ಗುರುಸಿದ್ದೇಶ್ವರ ಸ್ವಾಮಿಗಳು ಮಠದ ಉತ್ತರಾಧಿಕಾರಿ ಆಗಿ ಮುಂದುವರೆಯಬೇಕು. ಅವರಿಗೆ ಆಗುವುದಿಲ್ಲ ಎಂದಾಗ ಮಾತ್ರ ಉಳಿದವರಿಗೆ ಅವಕಾಶ ಕೊಡಬೇಕು ಎಂದು ಮಲ್ಲಿಕಾರ್ಜುನ ಸ್ವಾಮೀಜಿ ಒತ್ತಾಯಿಸಿದರು.