ಧಾರವಾಡ: ರಾಜ್ಯದಲ್ಲಿ ಸಿಎಂ (CM Chnage row in Karnataka) ಬದಲಾವಣೆಯಾಗುವ ವಿಚಾರವಿಲ್ಲ. ಅವರು ಒಳ್ಳೆಯ ಕೆಲಸ ಮಡುತ್ತಿದ್ದಾರೆ ಅವರೇ ಸಿಎಂ ಆಗಿ ಇರುತ್ತಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Speaker Basavaraja Horatti) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬಿಟ್‌ಕಾಯಿನ್ ವಿಚಾರಣೆ (BitCoin row) ನಡೆದಿದೆ. ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕ್ರಮ ಆಗಲಿದೆ. ಈ ಬಗ್ಗೆ ಸವಿಸ್ತಾರವಾದ ಚರ್ಚೆ ಆಗಲಿ. ರಾಜಕಾರಣದಲ್ಲಿ ಬದಲಾವಣೆ ಆಗೋದಿಲ್ಲ ಯಾಕೆಂದರೆ ಇವರು ಈಗ ಹುದ್ದೆಗೆ ಬಂದಿದ್ದಾರೆ. ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಬಂದಿದ್ದಾರೆ. ಅವರು ಇನ್ನಷ್ಟು ದಿನ ಮುಂದುವರೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಸದನದಲ್ಲಿ ಧರಣಿ, ಚೀರಾಟ ಬಂದ್ ಮಾಡಬೇಕಿದೆ. ಈ ಬಗ್ಗೆ ನಾನು ಪುಸ್ತಕ ಮಾಡಿದ್ದೇನೆ ಶಿಮ್ಲಾದಲ್ಲಿ ಆಲ್ ಇಂಡಿಯಾ ಸ್ಪೀಕರ್‌ಗಳ ಸಭೆ (Meeting of All India Speakers in Shimla) ಇದೆ, ಅಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ. ಈಗ ಬರುತ್ತಿರುವ ಶಾಸಕರಿಗೆ ಸಮಾಜ, ಜನರ ಬಗ್ಗೆ ಕಾಳಜಿಯೇ ಇಲ್ಲ ಕಾಳಜಿಯ ಕೆಲಸ ಮಾಡಬೇಕಿದೆ. ಅದನ್ನೇ ನಾನು ಅಜೆಂಡಾದಲ್ಲಿ ಇನ್ನು ಸೇರಿಸಲಿದ್ದೇನೆ ಎಂದಿದ್ದಾರೆ.
ಓದಿ: ದಾವಣಗೆರೆ: ಮದುವೆ ಮನೆ ಊಟ ಸವಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ