ಹುಬ್ಬಳ್ಳಿ: ಕೆಲವು ಕನ್ನಡ ಪರ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಯಾವುದೇ ಬಂದ್ ಇಲ್ಲ. ಈ ಕುರಿತಂತೆ ಯಾವುದೇ ಸಂಘಟನೆಗಳು ಇಲ್ಲಿಯವರೆಗೂ ಮನವಿ ಮಾಡಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳು, ಶಾಲಾ -ಕಾಲೇಜುಗಳಿಗೆ ರಜೆ ಇಲ್ಲ. ಅಲ್ಲದೇ ಎಂದಿನಂತೆ ಜನರ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಬಂದ್ ಇಲ್ಲ:
ಅವಳಿನಗರದಲ್ಲಿ ಯಾವುದೇ ಬಂದ್ ಇಲ್ಲ ಎಂದು ಇದೇ ವೇಳೆ ಪೊಲೀಸ್ ಆಯುಕ್ತ ಆರ್. ದಿಲೀಪ್ ಸ್ಪಷ್ಟಪಡಿಸಿದರು. ಯಾವುದೇ ಪ್ರತಿಭಟನೆ, ಮೆರವಣಿಗೆ ಸಭೆ ನಡೆಯುತ್ತಿಲ್ಲ. ಅಲ್ಲದೇ ಯಾವುದೇ ಬಿಗಿ ಭದ್ರತೆ ಸಹಿತ ಇಲ್ಲ. ಎಂದಿನಂತೆ ಜನವ್ಯವಸ್ಥೆ ಇರಲಿದೆ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ತಿಳಿಸಿದರು.