ಧಾರವಾಡ : ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ 2ನೇಯ ದಿನವಾದ ಇಂದು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಕಟ್ಟಡದ ಅವಶೇಷಗಳ ನಡುವೆ ಸಿಲುಕಿಕೊಂಡಿರುವ ವಿದ್ಯಾರ್ಥಿನಿ ಜೊತೆ ರಾಷ್ಟ್ರೀಯ ವಿಪತ್ತು ದಳದ ಗ್ಲೋಬಲ್ ಬಾಡಿ ಡೆಟೆಕ್ಟರ್ ಯಂತ್ರದ ಮೂಲಕ ಸಂಭಾಷಣೆ ನೆಡೆಸಿದೆ.
ಈಟಿವಿ ಭಾರತಕ್ಕೆ ಈ ಮಾಹಿತಿ ಲಭ್ಯವಾಗಿದೆ. ಸುಮಾರು ಒಂದು ನಿಮಿಷಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಬಾಲಕಿ ಜೊತೆ ಎನ್ಡಿಆರ್ಎಫ್ ತಂಡಸಂಭಾಷಣೆ ನಡೆಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಬಾಲಕಿ ಇದ್ದ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸದ್ಯ ಹಲವಾರು ಜನ ಕಟ್ಟಡ ಅವಶೇಷದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಟ್ವಿಟ್ ಮೂಲಕ ಸಾಂತ್ವನ ಹೇಳಿದ ಕೇಂದ್ರ ಸಚಿವ:
ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ತಮ್ಮ ಟ್ವಿಟ್ ಮೂಲಕ ಸಾಂತ್ವಾನ ಹೇಳಿದ್ದಾರೆ, ಘಟನೆಯ ಸಂಪೂರ್ಣ ವಿವರವನ್ನು ಸಂಸದ ಜೋಶಿಯವರಿಂದ ಪಡೆದ ರಾಜನಾಥ್ ಸಿಂಗ್. ಟ್ವಿಟ್ ಮೂಲಕ ಸಾಂತ್ವಾನ ಹೇಳಿದ್ದು, ರಕ್ಷಣಾ ಕಾರ್ಯ ಆದಷ್ಡು ಬೇಗ ನೆಡೆಯಲಿ. ಈ ದುರಂತದಲ್ಲಿನ ಗಾಯಾಳುಗಳು ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸಿದ್ದಾರೆ,
ಕಾರ್ಯಾಚರಣೆಗೆ ಪಿಲ್ಲರ್ ಅಡ್ಡಿ.
ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದ್ದು ನಿನ್ನೆ ಮಧ್ಯಾಹ್ನಎರಡು ಮೃತದೇಹಗಳನ್ನು ಹೊರ ತಗೆದಯಲಾಗಿದೆ.ಅವಶೇಷಗಳಡಿಯಲ್ಲಿ ಸಿಲುಕಿರುವ ನಾಲ್ವರು ಕುಡಿಯಲು ನೀರು ಕೇಳಿದ್ದು, ಅವರಿಗೆ ಎನ್ಡಿಆರ್ಎಫ್ ತಂಡ ನೀರನ್ನು ಒದಗಿಸಿದೆ.ಈ ನಾಲ್ವರನ್ನು ಹೊರತೆಗೆಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಕಾರ್ಯಾಚರಣೆಗೆ ಫಿಲ್ಲರ್ ಅಡ್ಡಿ ಬಂದಿದೆ.
ವಿಶೇಷ ಕೌಂಟರ್ ತೆರೆದ ಪೊಲೀಸರು
ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿದ ಹಾಗೂ ಕಾಣೆಯಾದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಟ್ಟಡ ಎದುರು ವಿಶೇಷ ಕೌಂಟರ್ ತೆರೆದಿರುವ ಪೊಲೀಸರು, ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದುವರೆಗೆ 18 ಜನರು ಕಾಣೆಯಾಗಿದ್ದಾರೆ ಎಂದು ಅವರ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.