ಹುಬ್ಬಳ್ಳಿ: ಕೊರೊನಾ ವೈರಸ್ ಇಡೀ ಜಗತ್ತನೇ ತಲ್ಲಣಗೊಳಿಸಿದೆ. ವೈದ್ಯಕೀಯ ಕ್ಷೇತ್ರ ಈ ವೈರಸ್ಗೆ ಮದ್ದು ಕಂಡು ಹಿಡಿಯಲು ಹರಸಾಹಸ ಪಡುತ್ತಿದೆ. ಆದರೂ ಇದುವರೆಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ.
ಇದರ ನಡುವೆ ಉತ್ತರ ಕರ್ನಾಟಕ ಭಾಗದ ಸಂಜೀವಿನಿಯಾದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಆದರೆ ವಾಣಿಜ್ಯ ನಗರಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತಿದ್ದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೆಚ್ಚಿನ ಹೊರೆ ಬಿದ್ದಿದೆ.
ಕಿಮ್ಸ್ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಗಳಿಂದ SARI ಹಾಗೂ ILI ಕೇಸ್ಗಳ ನಿರಾಕರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳು ಕಿಮ್ಸ್ ಆಸ್ಪತ್ರೆಯತ್ತ ಮುಖ ಮಾಡುತಿದ್ದಾರೆ. ಕೊರೊನಾ ವೈರಸ್ ವಿರುದ್ಧ ಶತಾಯಗತಾಯು ಹೋರಾಟ ಮಾಡುತ್ತಿರುವ ಕಿಮ್ಸ್ ಆಸ್ಪತ್ರೆಗೆ ರೋಗಿಗಳ ದಂಡೇ ಬರುತಿದ್ದು, ಕೆಲಸದ ಒತ್ತಡ ಮೂರು ಪಟ್ಟು ಹೆಚ್ಚಿದೆ.
ಕೆಮ್ಮು, ನೆಗಡಿ, ಜ್ವರದಿಂದ ನರಳುವ ರೋಗಿಗಳಿಗೆ ಕೆಲವೊಂದು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಣೆ ಮಾಡಿರುವ ಬೆನ್ನಲ್ಲೇ ಕಿಮ್ಸ್ ಆಸ್ಪತ್ರೆ ತುಂಬಿ ತುಳುಕುತ್ತಿದೆ. ನಿತ್ಯ ಹಲವು ರೋಗಿಗಳನ್ನು ಕಿಮ್ಸ್ಗೆ ಕಳುಹಿಸುತ್ತಿರುವ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಜನಸಂದಣಿ ಹೆಚ್ಚುತಿದೆ. ಯಾರಿಗೆ ಚಿಕಿತ್ಸೆ ನೀಡಬೇಕು ಎಂಬುವ ಸ್ಥಿತಿಯಲ್ಲಿ ಕಿಮ್ಸ್ ವೈದ್ಯರು ಪರದಾಡುವಂತಾಗಿದೆ.
ದಿನದಿಂದ ದಿನಕ್ಕೆ ಕಿಮ್ಸ್ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒತ್ತಡದಲ್ಲಿಯೇ ಕಿಮ್ಸ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರೂ ಕೂಡ ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ. ಇದು ನಮ್ಮ ಕರ್ತವ್ಯ ಎನ್ನುತ್ತಾರೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ಮೂಗು ಮುರಿಯುವ ಪ್ರತಿಷ್ಡಿತ ಖಾಸಗಿ ಆಸ್ಪತ್ರೆಗಳ ಆಟಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕಿವಿ ಹಿಂಡಬೇಕಿದೆ.
ಕೈಕೊಟ್ಟ ಖಾಸಗಿ ಆಸ್ಪತ್ರೆಗಳು: ಕಿಮ್ಸ್ನ ಮೇಲೆ ಮೂರು ಪಟ್ಟು ಹೆಚ್ಚು ಒತ್ತಡ! - ಕೋವಿಡ್ 19
ಕೊರೊನಾ ಇಡೀ ಜಗತ್ತಿಗೇ ಮಾರಕವಾಗಿ ಪರಿಣಮಿಸುತ್ತಿದೆ. ಇದರ ನಿರ್ಮೂಲನೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊಡುಗೆ ಅತ್ಯಮೂಲ್ಯ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಮಾತು ಕೇಳಿ ಬರುತ್ತಿದೆ.