ಹುಬ್ಬಳ್ಳಿ: ತಂದೆಯೊರ್ವ ತನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮಕ್ಕೆ ಕೈಗೊಳ್ಳುವಂತೆ ಡಿಜಿಪಿಯನ್ನ ಭೇಟಿ ಆಗಲು ಬಂದರೂ ಕೂಡ ಭೇಟಿಗೆ ಪೋಲಿಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಮಾಧ್ಯಮದ ಮೂಲಕ ತನ್ನ ಸಂಕಷ್ಟ ಹೇಳಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ಹಾಸ್ಟೆಲ್ ವಾರ್ಡನ್ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ವಿಜಯ ಹಿರೇಮಠ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ಹೀಗಾಗಿ ಅವನ ತಂದೆ ಮೃತ್ಯುಂಜಯ ಸಾಕಷ್ಟು ಬಾರಿ ಸಂಬಂಧ ಪಟ್ಟ ಪೋಲಿಸ್ ಅಧಿಕಾರಿಗಳಿಗೆ ಭೇಟಿ ಆದರೂ ಪ್ರಯೋಜನವಾಗಿಲ್ಲ.
ಹೀಗಾಗಿ ಪೊಲೀಸ್ ಇಲಾಖೆಯಿಂದ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಮೃತಪಟ್ಟ ವಿಜಯ್ ತಂದೆ ನಿನ್ನೆ ಡಿಜಿಪಿಗೆ ಮನವಿ ಕೊಡಲು ಬಂದಿದ್ದರು. ಆದರೆ ಡಿಜಿಪಿ ಭೇಟಿಗೆ ಪೋಲಿಸರು ಅವಕಾಶ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬಂದ ಮೃತ್ಯುಂಜಯ ಕಳೆದ ವರ್ಷ ಹಾನಗಲ್ ಹಾಸ್ಟೆಲ್ ದಯಾನಂದ್ ಚಾತ್ರಾಲಾಯದ ವಾರ್ಡನ್ ಶ್ರವಣ ಕುಮಾರ ಗುರೂಜಿಗೆ ಇದುವರೆಗೂ ಕಠಿಣವಾದ ಶಿಕ್ಷೆ ಆಗಿಲ್ಲ.
ಹಾವೇರಿ ಎಸ್ ಪಿ ಅವರಿಗೆ ನಾಲ್ಕು ಬಾರಿ ಹಾಗೂ ಹಾವೇರಿ ಜಿಲ್ಲಾಧಿಕಾರಿ ಬಳಿ ನಾಲ್ಕು ಬಾರಿ ಹೋಗಿದ್ದರು ಯಾವುದೇ ಪ್ರಯೋಜನವಾಗಿಲ್ಲ. ನನಗೆ ನ್ಯಾಯ ಸಿಗಬೇಕೆಂದು ನಾನು ಅಲೆದು ಅಲೆದು ಸುಸ್ತಾಗಿದ್ದೇನೆ ಅಂತಾ ಅಳಲು ತೋಡಿಕೊಂಡಿದ್ದಾರೆ.