ETV Bharat / state

ವಿದ್ಯಾಕಾಶಿಯಲ್ಲಿ ಹಣ್ಣುಗಳ ರಾಜನ ಮೇಳ ... ಒಂದೇ ಸೂರಿನಡಿ ವಿವಿಧ ತಳಿಯ ಮಾವು ಲಭ್ಯ - kannada news

ಧಾರವಾಡದಲ್ಲಿ ತೋಟಗಾರಿಕಾ ಇಲಾಖೆ 5 ದಿನಗಳ ಮಾವಿನ ಮೇಳವನ್ನು ಅಯೋಜಿಸಿದ್ದು, ಈ ಮೇಳದಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟ ಕೂಡಾ ಮಾಡಲಾಗುತ್ತಿದೆ.

ತೋಟಗಾರಿಕಾ ಇಲಾಖೆ 5 ದಿನಗಳ ಮಾವಿನ ಮೇಳ
author img

By

Published : May 27, 2019, 9:31 PM IST

ಧಾರವಾಡ : ಮಾವು ಹಣ್ಣುಗಳ ರಾಜ ಈತನನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಆದ್ರೆ ಈ ಹಣ್ಣು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಜನರು ಖರೀದಿಸಲು ಹಿಂದೇಟು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈ ರಾಜನನ್ನು ಜನಸಾಮಾನ್ಯರವರೆಗೆ ಮುಟ್ಟಿಸೋ ಉದ್ದೇಶದಿಂದ ಧಾರವಾಡದಲ್ಲಿ ಐದು ದಿನಗಳ ಮಾವು ಮೇಳವನ್ನು ಆಯೋಜಿಸಲಾಗಿದೆ.

ಧಾರವಾಡ ಮಾವುಗಳ ಪ್ರದೇಶ ಅಂತಲೇ ಹೆಸರಾಗಿದ್ದು, ಇಲ್ಲಿನ ಬಹುತೇಕ ಪ್ರದೇಶದಲ್ಲಿ ಬಗೆ ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತೆ. ಇಂಥ ವಿವಿಧ ಹಣ್ಣುಗಳು ಒಂದೇ ಸೂರಿನಡಿ ಸಿಕ್ಕರೆ ಹೇಗೆ?, ಅದಕ್ಕೆಂದೇ ತೋಟಗಾರಿಕಾ ಇಲಾಖೆ 5 ದಿನಗಳ ಮಾವಿನ ಮೇಳವನ್ನು ಆಯೋಜಿಸಿದ್ದು, ಈ ಮೇಳದಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟ ಕೂಡಾ ಮಾಡಲಾಗುತ್ತೆ.

ತೋಟಗಾರಿಕಾ ಇಲಾಖೆ ಆಯೋಜಿಸಿದ 5 ದಿನಗಳ ಮಾವಿನ ಮೇಳ

ಮಾವು ಬೆಳೆಗಾರರು ಮತ್ತು ಗ್ರಾಹಕರ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಿರೋ ತೋಟಗಾರಿಕೆ ಇಲಾಖೆ, ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ನಿಗದಿತ ಬೆಲೆಗೆ ಮಾರಾಟ ಮಾಡುತ್ತಿದೆ. ಸಾಂಪ್ರದಾಯಿಕ ಶೈಲಿಯಲ್ಲಿಯೇ ಹಣ್ಣು ಮಾಡಲಾಗಿದ್ದು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಹಣ್ಣುಗಳಿಗಿಂತ ಆರೋಗ್ಯಕರವಾಗಿವೆ.

ರೈತರು ತಾವು ಬೆಳೆದ ಆಲ್ಪೋನ್ಸಾ, ಬೇನಿಶಾನ್, ಕಲ್ಮಿ, ರುಮಾನಿ ಮುಂತಾದ ಬಗೆ ಬಗೆಯ ಹಣ್ಣುಗಳನ್ನು ತಂದು ಪ್ರದರ್ಶನ ಮಾಡಿದ್ದಷ್ಟೇ ಅಲ್ಲದೇ ಮಾರಾಟ ಮಾಡುತ್ತಿದ್ದಾರೆ. ಹತ್ತಾರು ಬಗೆಯ ಹಣ್ಣುಗಳು ಒಂದೇ ಸೂರಿನಡಿ ಸಿಕ್ಕಿದ್ದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.

ಒಂದು ಕಡೆ ರೈತರು ತಾವು ಬೆಳೆದ ಫಸಲಿಗೆ ಬೆಲೆ ಇಲ್ಲ ಅಂತಾ ನೋವು ಮಾಡಿಕೊಳ್ಳುತ್ತಿರುತ್ತಾರೆ. ಮತ್ತೊಂದು ಕಡೆ ಮಾರುಕಟ್ಟೆಗೆ ಒಯ್ದ ಫಸಲು ಮಾರಾಟದಲ್ಲಿ ಮಧ್ಯವರ್ತಿಗಳ ಕಾಟದಿಂದ ರೈತರಿಗೆ ಭಾರೀ ನಷ್ಟವಾಗುತ್ತೆ. ಆದ್ರೆ ಇಲ್ಲಿ ಅಂಥ ಯಾವುದೇ ಸಮಸ್ಯೆ ಇಲ್ಲದೇ ರೈತರಿಗೆ ತಾವು ಬೆಳೆದ ಮಾವಿನ ಹಣ್ಣುಗಳಿಗೆ ಸೂಕ್ತ ದರ ಸಿಗೋದಲ್ಲದೇ ಗ್ರಾಹಕರಿಗೂ ಕಡಿಮೆ ಬೆಲೆಗೆ ಹಣ್ಣು ಸಿಗುತ್ತಿರೋದು ಸಂತಸದ ವಿಷಯವೇ ಸರಿ.

Intro:ಧಾರವಾಡ: ಮಾವು ಹಣ್ಣುಗಳ ರಾಜ ಈತನನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಆದರೆ ಈ ಹಣ್ಣು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಜನರು ಖರೀದಿಸಲು ಹಿಂದೇಟು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈ ರಾಜನನ್ನು ಜನಸಾಮಾನ್ಯರವರೆಗೆ ಮುಟ್ಟಿಸೋ ಉದ್ದೇಶದಿಂದ ಧಾರವಾಡದಲ್ಲಿ ಐದು ದಿನಗಳ ಮಾವು ಮೇಳವನ್ನು ಆಯೋಜಿಸಲಾಗಿದೆ.

ಧಾರವಾಡ ಮಾವುಗಳ ಪ್ರದೇಶ ಅಂತಲೇ ಹೆಸರಾಗಿದೆ. ಇಲ್ಲಿನ ಬಹುತೇಕ ಪ್ರದೇಶದಲ್ಲಿ ಬಗೆ ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತೆ. ಇಂಥ ವಿವಿಧ ಹಣ್ಣುಗಳು ಒಂದೇ ಕಡೆ ಸಿಕ್ಕರೆ ಹೇಗೆ? ಅದಕ್ಕೆಂದೇ ತೋಟಗಾರಿಕಾ ಇಲಾಖೆ ಮಾವಿನ ಮೇಳವನ್ನು ಆಯೋಜಿಸಿದೆ. ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಆಯೋಜಿಸಲಾಗಿರೋ 5 ದಿನಗಳ ಈ ಮೇಳದಲ್ಲಿ ಹತ್ತಾರು ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಆರಂಭವಾಗಿದೆ. ಮಾವು ಬೆಳೆಗಾರರ ಮತ್ತು ಗ್ರಾಹಕ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರೋ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಈ ಮೇಳ ನಡೆಯುತ್ತಿದೆ.

2009ರಿಂದಲೂ ಪ್ರತಿವರ್ಷ ಈ ಮೇಳವನ್ನು ಆಯೋಜಿಸುತ್ತಾ ಬರಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಮಾವಿನ ಪ್ರಮಾಣ ಕಡಿಮೆ ಇರುವುದರಿಂದ ಬೆಲೆ ಗಗನಕ್ಕೇರಿದೆ. ಆದರೆ ತೋಟಗಾರಿಕಾ ಇಲಾಖೆ ಮಾವಿನ ಮೇಳವನ್ನು ಆಯೋಜಿಸಿ, ರೈತರ ಮನವೊಲಿಸಿ ವಿವಿಧ ತಳಿಗಳ ಮಾವನ್ನು ಇಲ್ಲಿಗೆ ತರುವಂತೆ ಮಾಡಿದೆ. ಅಷ್ಟೇ ಅಲ್ಲ, ಬೆಲೆಗೆ ನಿರ್ದಿಷ್ಟವಾದ ಬೆಲೆಯನ್ನೂ ನಿಗದಿ ಪಡಿಸಿದೆ.Body:ಇನ್ನು ಇಲ್ಲಿಗೆ ಬರೋ ಮಾವು ಸಾಂಪ್ರದಾಯಿಕ ಶೈಲಿಯಲ್ಲಿಯೇ ಹಣ್ಣು ಮಾಡಲಾಗಿದ್ದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗೋ ಮಾವು ರಾಸಾಯನಿಕ ಬಳಸಿ ಹಣ್ಣು ಮಾಡಿರುವಂಥದ್ದು. ಆದರೆ ಕಡ್ಡಾಯವಾಗಿ ಇಲ್ಲಿಗೆ ರೈತರು ತರೋ ಹಣ್ಣುಗಳು ಸಾಂಪ್ರದಾಯಿಕ ಶೈಲಿಯಲ್ಲಿಯೇ ಇರಬೇಕು ಅನ್ನೋ ನಿಯಮವನ್ನು ಮಾಡಲಾಗಿದೆ. ಇನ್ನು ಆಯಾ ಹಣ್ಣುಗಳ ಗಾತ್ರ, ಗುಣಮಟ್ಟದ ಆಧಾರದಲ್ಲಿಯೇ ದರವನ್ನು ನಿಗದಿಪಡಿಸಲಾಗಿರುತ್ತೆ. ರೈತರು ತಾವು ಬೆಳೆದ ಆಪೋಸ, ಬೇನಿಶಾನ್, ಕಲ್ಮಿ, ರುಮಾನಿ ಮುಂತಾದ ಬಗೆ ಬಗೆಯ ಹಣ್ಣುಗಳನ್ನು ತಂದು ಪ್ರದರ್ಶನ ಮಾಡಿದ್ದಷ್ಟೇ ಅಲ್ಲದೇ ಮಾರಾಟ ಮಾಡುತ್ತಿದ್ದಾರೆ. ಹತ್ತಾರು ಬಗೆಯ ಹಣ್ಣುಗಳು ಒಂದೇ ಸೂರಿನಡಿ ಸಿಕ್ಕಿದ್ದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.

ಒಂದು ಕಡೆ ರೈತರು ತಾವು ಬೆಳೆದ ಫಸಲಿಗೆ ಬೆಲೆ ಇಲ್ಲ ಅಂತಾ ನೋವು ಮಾಡಿಕೊಳ್ಳುತ್ತಿರುತ್ತಾರೆ. ಮತ್ತೊಂದು ಕಡೆ ಮಾರುಕಟ್ಟೆಗೆ ಒಯ್ದ ಫಸಲು ಮಾರಾಟದಲ್ಲಿ ಮಧ್ಯವರ್ತಿಗಳ ಕಾಟದಿಂದ ರೈತರಿಗೆ ಭಾರೀ ನಷ್ಟವಾಗುತ್ತೆ. ಆದರೆ ಇಲ್ಲಿ ಅಂಥ ಯಾವುದೇ ಸಮಸ್ಯೆ ಇಲ್ಲದೇ ರೈತರಿಗೆ ತಾವು ಬೆಳೆದ ಮಾವಿನ ಹಣ್ಣುಗಳಿಗೆ ಸೂಕ್ತ ದರ ಸಿಗೋದಲ್ಲದೇ ಗ್ರಾಹಕರಿಗೂ ಕಡಿಮೆ ಬೆಲೆಗೆ ಹಣ್ಣು ಸಿಗುತ್ತಿರೋದು ಸಂತಸದ ವಿಷಯವೇ ಸರಿ.

ಬೈಟ್: ರಾಮಚಂದ್ರ ಮಡಿವಾಳ, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ

ಬೈಟ್: ಪರಮೇಶ, ಗ್ರಾಹಕ ( ಕೇಸರಿ ಶರ್ಟ್)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.