ETV Bharat / state

ಬಿಎಸ್​ವೈದು ಬರೀ ಸುಳ್ಳು, ಶೆಟ್ಟರದು ತಮಟೆ, ಜೋಶಿಯದ್ದು ತಾಳ: ಸಿದ್ದು ಕಿಡಿ ಕಿಡಿ - ಹುಬ್ಬಳ್ಳಿ ಲೆಟೆಸ್ಟ್ ನ್ಯೂಸ್

ಬಿಜೆಪಿಯವರು ಪ್ರಜಾಭುತ್ವವನ್ನ ಹತ್ತಿಕ್ಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

The BJP is not supportive of democracy
ಬಿಎಸ್​ವೈ ಬರೀ ಸುಳ್ಳು ಹೇಳೋದು, ಶೆಟ್ಟರ್ ಅದಕ್ಕೆ ತಮಟೆ ಹೊಡೆಯೋದು, ಜೋಶಿ ತಾಳ ಹಾಕೋದು: ಸಿದ್ದು ಕಿಡಿ
author img

By

Published : Jan 9, 2020, 3:23 PM IST

ಹುಬ್ಬಳ್ಳಿ: ಬಿಜೆಪಿಯವರು ಪ್ರಜಾಭುತ್ವವನ್ನ ಹತ್ತಿಕ್ಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಮಾನ ‌ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನ ಜ್ಯೋತಿನಿವಾಸದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ. ಅಲ್ಲದೇ ಜೆಎನ್​ಯುನಲ್ಲಿ ನಡೆದ ಘಟನೆ ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿಯಾಗಿದೆ. ಇದರಲ್ಲಿ ನೇರವಾಗಿ ಅಮಿತ್ ಶಾ ಭಾಗವಹಿಸಿದ್ದಾರೆ. ಇನ್ನೂ ಕಾಂಗ್ರೆಸ್ ಸಿಎಎ ವಿರುದ್ದ ಪ್ರತಿಭಟನೆ ಮಾಡೇ ಇಲ್ಲ. ವಿನಾಃಕಾರಣ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಎಸ್​ವೈ ಬರೀ ಸುಳ್ಳು ಹೇಳೋದು, ಶೆಟ್ಟರ್ ಅದಕ್ಕೆ ತಮಟೆ ಹೊಡೆಯೋದು, ಜೋಶಿ ತಾಳ ಹಾಕೋದು: ಸಿದ್ದು ಕಿಡಿ

ಡಿ ಕೆ ಶಿವಕುಮಾರ್​ ನನ್ನನ್ನು ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್​ಗೆ ಬಿಟ್ಟಿದ್ದು. ಏನಾಗುತ್ತೆ ನೋಡೋಣ ಎಂದ ಅವರು, ನೆರೆ ಪರಿಹಾರ ವಿಚಾರದ ಕುರಿತು ಮಾತನಾಡಿದ ಅವರು, ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. 6 ನೂರು ಚಿಲ್ಲರೆ ಕೋಟಿ ಬಂದಿದೆ. ಆದರೆ 1800 ಕೋಟಿ ಎನ್ನುತ್ತಾರೆ. 36 ಸಾವಿರ ಕೋಟಿ ನಷ್ಟವಾಗಿದೆ ಅಂತ ರಾಜ್ಯ ಸರ್ಕಾರವೇ ಹೇಳಿದೆ. ಕೇಂದ್ರ ಸರ್ಕಾರದ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ಕಿಡಿಕಾರಿದರು.

ಮಾಹದಾಯಿ ವಿಷಯದಲ್ಲಿ ಬಿಜೆಪಿ ತಮ್ಮನ್ನ ತಾವು ಸಮರ್ಥನೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಮನಸು ಮಾಡಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ. ಮಹದಾಯಿ ವಿಷಯದಲ್ಲಿ ಬಿಎಸ್​ವೈ ಬರೀ ಸುಳ್ಳು ಹೇಳುತ್ತಾರೆ. ಶೆಟ್ಟರ್ ಅದಕ್ಕೆ ತಮಟೆ ಹೊಡೆಯುತ್ತಾರೆ. ಜೋಶಿ ತಾಳ ಹಾಕುತ್ತಾರೆ. ಹಿಂದೆಯೂ ಕೂಡಾ ಅಧಿಕಾರಕ್ಕೆ ಬಂದ ಕೂಡಲೆ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು. ಇವಾಗ ಏನ್ ಮಾಡಿದರು. ಆ ಬಗ್ಗೆ ಮಾತೇ ಆಡಲ್ಲ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

Intro:ಹುಬ್ಬಳ್ಳಿ-06

ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ಬಿಜೆಪಿಯವರು ಪ್ರಜಾಭುತ್ವವನ್ನ ಹತ್ತಿಕ್ಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು,
ನಿನ್ನೆ ಬೆಂಗಳೂರಿನ ಜ್ಯೋತಿನಿವಾಸದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವಾಗಿದೆ. ಅಲ್ಲದೇ ಜೆಎನ್ ಯೂ ನಲ್ಲಿ ಏನಾಯ್ತು ಅದು ಪಕ್ಕಾ ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿಯಾಗಿದೆ. ಇದರಲ್ಲಿ ನೇರವಾಗಿ ಅಮಿತ್ ಶಾ ಭಾಗವಹಿಸಿದ್ದಾರೆ. ಇನ್ನೂ ಕಾಂಗ್ರೆಸ್ ಸಿಎಎ ವಿರುದ್ದ ಪ್ರತಿಭಟನೆ ಮಾಡೇ ಇಲ್ಲ. ವಿನಾಕಾರಣ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದ ವಿರುದ್ದ ಆರೋಪ ಮಾಡುತ್ತಿದ್ದಾರೆ. ನಾವು ನಮ್ಮ ಪಕ್ಷದ ವತಿಯಿಂದ ಸ್ಪಷ್ಟ ವಾಗಿ ವಿರೋಧಿಸುತ್ತೇವೆ ಎಂದರು.
ಇನ್ನೂ ಡಿಕೆಶಿವಕುಮಾರ ನನ್ನ ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ಗೆ ಬಿಟ್ಟಿದ್ದು.
ಏನಾಗುತ್ತೆ ನೋಡೋಣ ಎಂದರು.

ನೆರೆ ಪರಿಹಾರ ವಿಚಾರದ ಕುರಿತು ಮಾತನಾಡಿದ ಅವರು, ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ೬ ನೂರು ಚಿಲ್ಲರೆ ಕೋಟಿ ಬಂದಿದೆ.ಆದರೆ 1800 ಕೋಟಿ ಎನ್ನುತ್ತಾರೆ.
36 ಸಾವಿರ ಕೋಟಿ ನಷ್ಟವಾಗಿದೆ ಅಂತ ರಾಜ್ಯ ಸರ್ಕಾರವೇ ಹೇಳಿದೆ.ಆದರೇ ಕೇಂದ್ರ ಸರ್ಕಾರದ ಪರಿಹಾರ ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದ ಅವರು, ಕೇಂದ್ರ ಸರ್ಕಾರ ದಿವಾಳಿಯಾಗಿದೆ.ಕೇಂದ್ರವೇ ದಿವಾಳಿಯಾಗಿದೆ ಇನ್ನೇಲಿ ಬಿಎಸ್ ವೈಗೆ ದುಡ್ಡು ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
ಅದೇನೋ ಯಡಿಯೂರಪ್ಪ ಕಡಿದು ಕಟ್ಟೆ ಹಾಕ್ತಿನಿ ಅಂದಿದ್ದರು. ನೋಡೋಣ ಆರು ತಿಂಗಳು ಕಳೀಲಿ.
ಆ ಮೇಲೆ‌ ಹೋರಾಟ ಮಾಡೋಣ ಎಂದರು.

ಮಾಹದಾಯಿ ವಿಷಯದಲ್ಲಿ ಬಿಜೆಪಿ ತಮ್ಮನ್ನ ತಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ.ಮಹದಾಯಿ ವಿಷಯದಲ್ಲಿ ಬಿಎಸ್ ವೈ ಬರೀ ಸುಳ್ಳು ಹೇಳುತ್ತಾರೆ.ಶೆಟ್ಟರ್ ಅದಕ್ಕೆ ತಮಟೆ ಹೊಡೆಯುತ್ತಾರೆ,ಜೋಶಿ ತಾಳ ಹಾಕುತ್ತಾರೆ.
ಹಿಂದೆಯೂ ಕೂಡಾ ಅಧಿಕಾರಕ್ಕೆ ಬಂದ ಕೂಡಲೆ ಸಮಸ್ಯೆ ಬಗೆಹರಿಸುತ್ತೆನೆ ಎಂದಿದ್ದರು.ಇವಾಗ ಏನ್ ಮಾಡಿದರು ಆ ಬಗ್ಗೆ ಮಾತೇ ಆಡಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಬೈಟ್ - ಸಿದ್ದರಾಮಯ್ಯ, ಮಾಜಿ‌ ಮುಖ್ಯಮಂತ್ರಿBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.