ಹುಬ್ಬಳ್ಳಿ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೌಂಡ್ ಟೇಬಲ್ - 37 ಹಾಗೂ ಲೇಡಿಸ್ ಸರ್ಕಲ್- 45 ವತಿಯಿಂದ ಆದರ್ಶ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯರಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.
ರೋಗ ನಿರೋಧಕ ಮಾತ್ರೆ ಕಿಟ್ ವಿತರಿಸಿದ ನಂತರ ಮಾತನಾಡಿದ ಹುಬ್ಬಳ್ಳಿ ರೌಂಡ್ ಟೇಬಲ್-35 ಸಂಸ್ಥಾಪಕ ಹಿಮಾನುಶ್ ಕೋಠಾರಿ, ಇಂದು ಶಿಕ್ಷಕರ ದಿನ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ನಾವು ಶಿಕ್ಷರ ದಿನವಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಇದೀಗ ಕೊರೊನಾ ಮಹಾಮಾರಿ ಆವರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಶಿಕ್ಷಕರಿಗಾಗಿ ಮಾತ್ರೆ, ಕಿಟ್ ವಿತರಣೆ ಮಾಡಿದ್ದೇವೆ ಎಂದರು.
ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು, ಮನೆ ಮನೆಗೆ ತೆರಳಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವ ಮೂಲಕ ಅವರ ಭವಿಷ್ಯ ರೂಪಿಸುತ್ತಿದ್ದಾರೆ ಎಂದರು. ಬಹುತೇಕ ಕಡೆ ನಮ್ಮ ಸಂಸ್ಥೆ ಇದೇ ರೀತಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲೇಡಿಸ್ ಸರ್ಕಲ್ ಸಂಸ್ಥಾಪಕಿ ಮಾನಸಿ ಕೋಠಾರಿ, ಕ್ಲಬ್ ಸದಸ್ಯ ಸಚಿನ್ ಅಲಕವಾಡಿ, ಇನ್ನಿತರರು ಉಪಸ್ಥಿತರಿದ್ದರು.